More

    ಆರ್​ಆರ್​ಆರ್​ನ ಡಿಜಿಟಲ್ ಮತ್ತು ಸ್ಯಾಟಿಲೈಟ್ ಹಕ್ಕುಗಳು 325 ಕೋಟಿಗೆ ಮಾರಾಟ?

    ಮುಂಬೈ: ಸಲ್ಮಾನ್​ ಖಾನ್​ ಅಭಿನಯದ ವಿತರಣೆ, ಸ್ಯಾಟಿಲೈಟ್​, ಡಿಜಿಟಲ್​ ಮತ್ತು ಸಂಗೀತದ ಹಕ್ಕುಗಳು ಜೀ ಟಿವಿಯವರು 190 ಕೋಟಿ ರೂ.ಗಳಿಗೆ ಖರೀದಿಸಿದ್ದೇ ಭಾರತದಲ್ಲಿ ಇದುವರೆಗೂ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಚಿತ್ರವು ಮುರಿದು ಹಾಕಿದೆ. ಮೂಲಗಳ ಪ್ರಕಾರ ಚಿತ್ರದ ಡಿಜಿಟಲ್​ ಮತ್ತು ಸ್ಯಾಟಿಲೈಟ್​ ಹಕ್ಕುಗಳನ್ನು ಜೀ ಸಂಸ್ಥೆಯು 325 ಕೋಟಿ ಕೊಟ್ಟು ಖರೀದಿಸಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ರಜನಿಕಾಂತ್, ಮೋಹನ್ ಬಾಬು ಒರಿಜಿನಲ್ ಗ್ಯಾಂಗ್​ಸ್ಟರ್​ಗಳಂತೆ …

    ಹಕ್ಕುಗಳ ಮಾರಾಟ ವಿಷಯದಲ್ಲಿ ಆರ್​ಆರ್​ಆರ್​ ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲಿದೆ ಎಂಬುದು ಹೊಸ ವಿಷಯವೇನಲ್ಲ. ಈ ಬಗ್ಗೆ ಕಳೆದ ಒಂದು ವರ್ಷದಿಂದ ಚರ್ಚೆ ನಡೆಯುತ್ತಲೇ ಇದ್ದು, ಎಲ್ಲ ಹಕ್ಕುಗಳೂ ಒಟ್ಟು ಎಷ್ಟು ಮೊತ್ತಕ್ಕೆ ಮಾರಾಟವಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ಕಳೆದ ವರ್ಷ ಬಂದ ಸುದ್ದಿಯ ಪ್ರಕಾರ, ಚಿತ್ರದ ವಿತರಣೆ, ಡಿಜಿಟಲ್​, ಸ್ಯಾಟಿಲೈಟ್​ ಮತ್ತು ಮ್ಯೂಸಿಕ್​ ಹಕ್ಕುಗಳು ಸುಮಾರು 500 ಕೋಟಿ ರೂ.ಗಳಿಗೆ ಮಾರಾಟವಾಗಬಹುದು ಮತ್ತು ಚಿತ್ರದ ಬಜೆಟ್ 300 ಕೋಟಿ ಎಂದು ಹೇಳಲಾಗುತ್ತಿರುವುದರಿಂದ, ನಿರ್ಮಾಪಕರಿಗೆ ಕಡಿಮೆ ಎಂದರೂ 200 ಕೋಟಿಯ ಪ್ರಾಫಿಟ್​ ಆಗಲಿದೆ ಎಂದು ಹೇಳಲಾಗಿತ್ತು.

    ಆದರೆ, ಈಗ ಲೆಕ್ಕಾಚಾರವೇ ಬೇರೆಯಾಗಿದೆ. ಮೂಲಗಳ ಪ್ರಕಾರ, ಆರ್​ಆರ್​ಆರ್​ ಚಿತ್ರದ ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳನ್ನು ಮಾತ್ರ ಜೀ ಸಂಸ್ಥೆಯು ಖರೀದಿಸುವುದಕ್ಕೆ ಮುಂದಾಗಿದ್ದು, ಅದಕ್ಕಾಗಿಯೇ 325 ಕೋಟಿ ಎತ್ತಿಟ್ಟಿದೆಯಂತೆ. ಆರ್​ಆರ್​ಆರ್​ ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಐದೂ ಭಾಷೆಗಳ ಸ್ಯಾಟಿಲೈಟ್​ ಮತ್ತು ಡಿಜಿಟಲ್​ ಹಕ್ಕುಗಳು ಜೀ ಸಂಸ್ಥೆಯ ಬಳಿ ಇರಲಿದೆ. ಇದನ್ನು ಹೊರತುಪಡಿಸಿ, ವಿತರಣೆಯ ಹಕ್ಕುಗಳು ಮಾರಾಟವಾಗಬೇಕಿದ್ದು, ಭಾರತ, ಓವರ್​ಸೀಸ್​ನಿಂದ ಏನಿಲ್ಲವೆಂದರೂ 300 ಕೋಟಿಯ ಆಫರ್​ ಬರಬಹುದು ಎಂದು ಅಂದಾಜಿಸಲಾಗುತ್ತಿದೆ.

    ಇದನ್ನೂ ಓದಿ: ಉಸಿರು ತಂಡಕ್ಕೆ ದರ್ಶನ್ ಸಾಥ್; ಅವಶ್ಯಕತೆ ಇದ್ದವರಿಗೆ ಆಕ್ಸಿಜನ್ ಪೂರೈಕೆ

    ಅಲ್ಲಿಗೆ ಆರ್​ಆರ್​ಆರ್​ ಚಿತ್ರವು ಚಿತ್ರೀಕರಣ ಹಂತದಲ್ಲಿರುವಾಗಲೇ ಡಬ್ಬಲ್​ ಪ್ರಾಫಿಟ್​ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಚಿತ್ರೀಕರಣ ಮುಗಿದು, ಬಿಡುಗಡೆಯ ಹಂತಕ್ಕೆ ಬರುವಷ್ಟರಲ್ಲಿ, ನಿರ್ಮಾಪಕರಿಗೆ ಒಟ್ಟಾರೆ ಅದೆಷ್ಟು ಲಾಭ ಬರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ದಿ ಫ್ಯಾಮಿಲಿ ಮ್ಯಾನ್ ವಿರುದ್ಧ ಎನ್​ಟಿಕೆ ಆಕ್ರೋಶ … ಇಲ್ಲಿದೆ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts