More

    ಜ್ಯೂನಿಯರ್​ ಎನ್​ಟಿಆರ್​ಗೆ ವಿಲನ್​ ಆದ ಚೋಟೇ ನವಾಬ್​!

    ಹೈದರಾಬಾದ್​: ಜ್ಯೂನಿಯರ್​ ಎನ್​ಟಿಆರ್​ ಅಭಿನಯದ ‘ಎನ್​ಟಿಆರ್​ 30’ ಚಿತ್ರಕ್ಕೆ ಇತ್ತೀಚೆಗಷ್ಟೇ ಬಾಲಿವುಡ್​ ನಟಿ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್​ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಬಾಲಿವುಡ್​ನ ಮತ್ತೊಬ್ಬ ಜನಪ್ರಿಯ ನಟ, ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿರುವ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಕೇಳಿ ಬಂದಿದೆ.

    ಇದನ್ನೂ ಓದಿ: ಏ. 28ಕ್ಕೆ ಬಿಡುಗಡೆಯಾಗಲಿದೆ ಜಗ್ಗೇಶ್​ ಅಭಿನಯದ ‘ರಾಘವೇಂದ್ರ ಸ್ಟೋರ್ಸ್​’ …

    ಬಾಲಿವುಡ್​ನಲ್ಲಿ ಚೋಟೇ ನವಾಬ್​ ಎಂದೇ ಜನಪ್ರಿಯರಾಗಿರುವ ಸೈಫ್​ ಅಲಿ ಖಾನ್​, ಈಗ ‘ಎನ್​ಟಿಆರ್​ 30’ ಚಿತ್ರದಲ್ಲಿ ವಿಲನ್​ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಸೈಫ್​ ಆಗಲೀ, ಚಿತ್ರತಂಡದವರಾಗಲೀ ಇನ್ನೂ ಈ ವಿಷಯವನ್ನು ಖಚಿತಪಡಿಸಿಲ್ಲ. ಹಾಗಾಗಿ, ಚಿತ್ರತಂಡದಿಂದ ಅಧಿಕೃತ ಮಾಹಿತಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

    ಬಾಲಿವುಡ್​ನಲ್ಲಿ ಹಲವು ಚಿತ್ರಗಳಲ್ಲಿ ಹೀರೋ ಆಗಿದ್ದ ಸೈಫ್​ ಅಲಿ ಖಾನ್​, ತಾನಾಜಿ ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಪ್ರಭಾಸ್​ ಅಭಿನಯದ ‘ಆದಿಪುರುಷ್​’ನಲ್ಲಿ ಅವರು ರಾವಣನಾಗಿ ಕಾಣಿಸಿಕೊಂಡಿದ್ದರು. ಈಗ ಜ್ಯೂನಿಯರ್​ ಎನ್​ಟಿಆರ್​ ವಿರುದ್ಧ ತೊಡೆ ತಟ್ಟುವುದಕ್ಕೆ ಹೊರಟಿದ್ದಾರೆ.

    ಇದನ್ನೂ ಓದಿ: ಯಶ್​ ಅಭಿನಯದ ಹೊಸ ಚಿತ್ರದ ಘೋಷಣೆ ಯಾವಾಗ? ಇಲ್ಲಿದೆ ಮಾಹಿತಿ …

    ಈ ಹೆಸರಿಡದ ಚಿತ್ರವನ್ನು ಕೊರಟಾಲ ಶಿವ ನಿರ್ಮಾಣ ಮಾಡುತ್ತಿದ್ದು, ನಂದಮೂರಿ ತಾರಕ ರಾಮರಾವ್​ ಆರ್ಟ್ಸ್​ನಡಿ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರಕ್ಕೆ ರತ್ನವೇಲು ಛಾಯಾಗ್ರಹಣ ಮತ್ತು ಅನಿರುದ್ಧ್​ ರವಿಚಂದರ್​ ಸಂಗೀತವಿರಲಿದೆ.

    ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತಕ್ಕೆ ದಿನ ನಿಗದಿ; ಆರ್.ಅಶೋಕ್, ಸಿ.ಟಿ ರವಿ ಪ್ರೆಸೆಂಟ್ಸ್ | ಅಶ್ವಥ್ ನಾರಾಯಣ ಚಿತ್ರಕತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts