More

    ಹಾಲಿವುಡ್​ಗೆ ರಾಮ್​ಚರಣ್​ ತೇಜ … ಸದ್ಯದಲ್ಲೇ ಅಭಿಮಾನಿಗಳಿಗೆ ಗುಡ್​ ನ್ಯೂಸ್​

    ಹೈದರಾಬಾದ್​: ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘RRR’ ಚಿತ್ರ ಬರೀ ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿಯೂ ಸೂಪರ್​ ಹಿಟ್​ ಆಗಿದೆ. ಈ ಚಿತ್ರದ ನಂತರ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ರಾಮ್​ಚರಣ್​ ತೇಜ ಹಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈ ಪೈಕಿ ರಾಮ್​ಚರಣ್​ ತೇಜ, ಹಾಲಿವುಡ್​ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿರುವ ಸುದ್ದಿಯೊಂದು ಹೊರಬಿದ್ದಿದೆ.

    ಇದನ್ನೂ ಓದಿ: ಧ್ರುವ ಸರ್ಜಾ ಮಗಳು ಹೇಗಿದ್ದಾಳೆ ಗೊತ್ತಾ?: ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ

    ಇತ್ತೀಚೆಗೆ ಸಿನಿಮಾ ವಿಮರ್ಶಕ ಸ್ಯಾಮ್​ ಫ್ರಾಗೋಸೋ ಅವರ ‘ಟಾಕ್​ ಈಸಿ’ ಎಂಬ ಪಾಡ್​ಕಾಸ್ಟ್​ಗೆ ಸಂದರ್ಶನ ನೀಡಿರುವ ರಾಮ್​ಚರಣ್​ ತೇಜ, ಹಾಲಿವುಡ್​ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಒಬ್ಬ ನಟನಾಗಿ ಯಾವುದೇ ದೇಶದಲ್ಲಿ ಕೆಲಸ ಸಿಕ್ಕರೂ ಮಾಡುವುದಕ್ಕೆ ಸಿದ್ಧ. ಸದ್ಯ ಹಾಲಿವುಡ್​ ಚಿತ್ರದಲ್ಲಿ ನಟಿಸುವ ಮಾತುಕಥೆ ನಡೆಯುತ್ತಿದ್ದು, ಚಿತ್ರ ಅಧಿಕೃತವಾಗಿ ಘೋಷಣೆಯಾದಾಗಲಷ್ಟೇ ಆ ಬಗ್ಗೆ ಮಾತನಾಡುವುದಕ್ಕೆ ಸಾಧ್ಯ. ಮುಂದಿನ ಕೆಲವು ತಿಂಗಳಲ್ಲಿ ಸುದ್ದಿ ಅಧಿಕೃತವಾಗಿ ಹೊರಬೀಳಲಿದೆ’ ಎಂದು ರಾಮ್​ಚರಣ್​ ಹೇಳಿಕೊಂಡಿದ್ದಾರೆ.

    ಹಾಲಿವುಡ್​ನಲ್ಲಿ ಜೂಲಿಯಾ ರಾಬರ್ಟ್ಸ್​, ಟಾಮ್​ ಕ್ರೂಸ್​ ಮತ್ತು ಬ್ರಾಡ್​ ಪಿಟ್​ ಜತೆಗೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿರುವ ರಾಮ್​ಚರಣ್​, ಅವರ ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೂ ಸಿದ್ಧ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೋಮಲ್ ಅಭಿನಯದ ಹೊಸ ಚಿತ್ರಕ್ಕೆ ‘ಯಲಾ ಕುನ್ನಿ’ ಎಂದು ನಾಮಕರಣ …

    ಸದ್ಯ ಶಂಕರ್​ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ರಾಮ್​ಚರಣ್​ ನಟಿಸುತ್ತಿದ್ದು, ಈ ಚಿತ್ರ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts