'ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಒಕ್ಕಲಿಗರು ನೆನಪಾಗಲಿಲ್ಲವೇ?'

DKshi
Published on

ಬೆಂಗಳೂರು: ಕನಕಪುರ ಬಂಡೆಯಲ್ಲಿ ಕ್ರಿಶ್ಚಿಯನ್ ಮೂರ್ತಿ ಸ್ಥಾಪಿಸುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಒಕ್ಕಲಿಗರು ಜ್ಞಾಪಕಕ್ಕೆ ಬರಲಿಲ್ಲ ಎಂದು ಡಿ.ವಿ.ಸದಾನಂದ ಗೌಡ ಕಿಡಿಕಾರಿದರು.

ಆರ್​ಆರ್​ ನಗರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಸೋಮವಾರ ಕೈಗೊಂಡಿದ್ದ ಪ್ರಚಾರದಲ್ಲಿ ಮಾತನಾಡಿದ ಸದಾನಂದಗೌಡ, ಆರ್​ಆರ್​ ನಗರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷರು ಜಾತಿ ರಾಜಕೀಯ ಮಾಡ್ತಿದ್ದಾರೆ. ಜಾತಿ ಮೇಲೆ ಡಿಕೆಶಿ ಬಂಡವಾಳ ಹೂಡಿದ್ದಾರೆ. ನಾನು, ಅಶ್ವಥ ನಾರಾಯಣ, ಸೋಮಶೇಖರ್, ನಾರಾಯಣಗೌಡ, ಆರ್​. ಶೋಕ್ ಎಲ್ಲರೂ ಒಕ್ಕಲಿಗರೇ... ಆದ್ರೆ ನಾವು ಅಭಿವೃದ್ಧಿ ಮೇಲೆ ರಾಜಕಾರಣ ಮಾಡ್ತೀವಿ. ಡಿಕೆಶಿ ಜಾತಿ ಮೇಲೆ ಚುನಾವಣೆ ಮಾಡೋಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು.

ದೇವೇಗೌಡರ ಹಾದಿಯನ್ನೇ ಡಿಕೆಶಿ ತುಳಿದಿದ್ದಾರೆ. ದೇವೇಗೌಡರು ಮತ್ತು ಡಿಕೆಶಿ ನಡುವೆ ಜಾತಿ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದೆ. ಈ ಜಾತಿ ರಾಜಕೀಯಕ್ಕೆ ಜನ ಉತ್ತರ ಕೊಡಬೇಕು. ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಮುನಿರತ್ನ ಬಿಜೆಪಿಗೆ ಸೇರಿದ್ರು. ಅಭಿವೃದ್ಧಿ ನೋಡಿ ಮತ ಕೊಡಿ. ಈ ಬಾರಿಯ ಚುನಾವಣೆ ಡಿ.ಕೆ. ಶಿವಕುಮಾರ್ ಜಾತಿ ರಾಜಕಾರಣಕ್ಕೂ ಇತಿಶ್ರೀ ಆಗುತ್ತದೆ, ಶಿವಕುಮಾರ್ ಭವಿಷ್ಯಕ್ಕೂ ಇಸ್ತ್ರಿ ಆಗುತ್ತದೆ ಎಂದು ಸದಾನಂದ ಗೌಡ ಮನವಿ ಮಾಡಿದರು.

ಮುನಿರತ್ನ ರಾಜೀನಾಮೆ ನೀಡಿದ್ದಕ್ಕೆ ಈ ಸರ್ಕಾರ ಬಂದಿದೆ. ಸಮ್ಮಿಶ್ರ ಸರ್ಕಾರದ ದೊಂಬರಾಟದಿಂದ ಈ ಕ್ಷೇತ್ರ ಅಭಿವೃದ್ಧಿ ಆಗಲಿಲ್ಲ. ಹಾಗಾಗಿ ಮುನಿರತ್ನ ಪಕ್ಷ ಬಿಟ್ಟು ಬಿಜೆಪಿಗೆ ಬಂದ್ರು. ಮುನಿರತ್ನ ಈ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಈ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net