ಅ.12ರಂದು ಕೊಡಂಗೆಯಲ್ಲಿ ರೋಟರಿ ಕಂಬಳ

1657356169943929498
Published on



ಮಂಗಳೂರು : ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ರೋಟರಿ ಕ್ಲಬ್ ಬಂಟ್ವಾಳ, ರೋಟರಿ ಕ್ಲಬ್ ಮೊಡಂಕಾಪು,
ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇವುಗಳ ಆಶ್ರಯದಲ್ಲಿ ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಸಿದ್ದಕಟ್ಟೆ ಕೊಡಂಗೆ ಇದರ ಸಹಯೋಗದಲ್ಲಿ 2ನೇ ವರ್ಷದ ರೋಟರಿ ಕಂಬಳ ಅ.12ರಂದು ಕೊಡಂಗೆ ಸಿದ್ದಕಟ್ಟೆಯಲ್ಲಿ ನಡೆಯಲಿದೆ.
ಬೆಳಗ್ಗೆ 8ಕ್ಕೆ ಸಭಾ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ ಉದ್ಘಾಟಿಸಲಿದ್ದಾರೆ. ಶಾಸಕ ರಾಜೇಶ್ ನಾಕ್
ಅಧ್ಯಕ್ಷತೆ ವಹಿಸಲಿದ್ದಾರೆ. ಕಂಬಳದ ಕರೆಯನ್ನು ರೊಟೇರಿಯನ್ ಪದ್ಮರಾಜ ಬಲ್ಲಾಳ ಮಾವಂತೂರು ಉದ್ಘಾಟಿಸುವರು ಎಂದು ಮೊಡಂಕಾಪು ರೋಟರಿ ಸ್ಥಾಪಕಾಧ್ಯಕ್ಷ ಎಲಿಯಾಸ್ ಸಾಂಕ್ಟಿಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಬಳಕೂಟದಲ್ಲಿ ಸುಮಾರು 170 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರಥಮ ಬಹುಮಾನ ಅರ್ಧ ಪವನ್ ಚಿನ್ನ ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ಬಹುಮಾನವಾಗಿ ಕಾಲುಪವನ್ ಚಿನ್ನದ ಪದಕ ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಕೇವಲ ರೋಟರಿ ಸದಸ್ಯರೇ ಸೇರಿಕೊಂಡು ಕಂಬಳದ ಸಂಪೂರ್ಣ ವೆಚ್ಚ ಭರಿಸುತ್ತಿದ್ದೇವೆ. ಪ್ರಥಮ ವರ್ಷದ ಕಂಬಳ ಯಶಸ್ಸು ಕಂಡಿದೆ. ಈ ಬಾರಿಯೂ ಅದ್ಧೂರಿಯಾಗಿ ನಡೆಸಲು ಸಿದ್ಧತೆ ನಡೆದಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಮುಖರಾದ ರಾಜ್ ಗೋಪಾಲ್ ರೈ, ಅವಿಲ್ ಮಿನೇಜಸ್, ವಿಜಯ ಫೆರ್ನಾಂಡಿಸ್,
ಬಸ್ತಿ ಮಾಧವ ಶೆಣೈ, ದುರ್ಗಾದಾಸ್ ಶೆಟ್ಟಿ, ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಭಾಸ್ಕರ ರೈ ಕಟ್ಟ, ಸುರೇಶ್ ಶೆಟ್ಟಿ,
ಮೋಹನ್ ಕೆ ಶ್ರೀಯಾನ್, ಶಶಿಧರ್ ಶೆಟ್ಟಿ ಕಲ್ಲಾಪು, ಮಹಮ್ಮದ್ ಯಾಸಿರ್, ಕೆ.ನಾರಾಯಣ ಹೆಗ್ಡೆ, ರಾಘವೇಂದ್ರ ಭಟ್, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net