ರೋಟರಿಯಿಂದ ವಿವಿಧ ಕೊಡುಗೆ ಹಸ್ತಾಂತರ

New Project (30)
Published on

ಸುಬ್ರಹ್ಮಣ್ಯ: ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಬೆಂಗಳೂರು ಜಾಲಹಳ್ಳಿ, ರೋಟರಿ ಕ್ಲಬ್ ಬೆಂಗಳೂರು ಸೆಂಟ್ರಲ್, ರೋಟರಿ ಕ್ಲಬ್ ತುರುವೇಕೆರೆ ವತಿಯಿಂದ ವಿವಿಧ ಕೊಡುಗೆಗಳನ್ನು ಶನಿವಾರ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್‌ಗಳ ಜಾಯಿಂಟ್ ಪ್ರಾಜೆಕ್ಟ್ ಕಾರ್ಯಕ್ರಮದಡಿ ಸುಬ್ರಹ್ಮಣ್ಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಎಸ್‌ಪಿಯು ಪ್ರೌಢಶಾಲಾ ವಿಭಾಗಕ್ಕೆ ವಿವಿಧ ಕೊಡುಗೆಗಳನ್ನು ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಯಾನಿಟರಿ ಪರಿಕರಗಳು, ಅಗ್ನಿ ನಿರೋಧಕ ಸಾಧನ, ಬೆಂಕಿ ನಂದಿಸುವ ಸಾಧನಗಳನ್ನು, ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಕಲರ್ ಪ್ರಿಂಟರ್, ಸ್ಯಾನಿಟರಿ ಸಾಮಗ್ರಿಗಳನ್ನು ನೀಡಲಾಯಿತು.

ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್. ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ದೇವಳ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಗುರು ಮಾಧವ ಮೂಕಮಲೆ, ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ನಂದಾ ಹರೀಶ್, ರೋಟರಿ ಜಾಲಹಳ್ಳಿ ಅಧ್ಯಕ್ಷೆ ರಮಣಿ, ಬೆಂಗಳೂರು ಸೆಂಟ್ರಲ್ ಅಧ್ಯಕ್ಷ ಚಂದ್ರಶೇಖರ್, ರೋಟರಿ ತುರುವೇಕೆರೆ ಅಧ್ಯಕ್ಷ ಉಮೇಶ್ ವಿ.ಆರ್., ಸುಬ್ರಹ್ಮಣ್ಯ ರೋಟರಿ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net