ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಂದ ಮಹತ್ವದ ಹೂಡಿಕೆಯನ್ನು ಪಡೆದುಕೊಂಡಿರುವುದಾಗಿ ಎಡು-ಫಿನ್‌ಟೆಕ್ ಸ್ಟಾರ್ಟಪ್ ಲಿಯೊ1 (LEO1) ಮಂಗಳವಾರ ತಿಳಿಸಿದೆ. ಆದರೆ, ಹೂಡಿಕೆಯ ಮೊತ್ತ ಮತ್ತು ಮೌಲ್ಯಮಾಪನವನ್ನು ಅದು ಬಹಿರಂಗಪಡಿಸಿಲ್ಲ.
ಆವಿಷ್ಕಾರ್ ಕ್ಯಾಪಿಟಲ್, ಕ್ಯೂಇಡಿ ಇನ್ವೆಸ್ಟರ್ಸ್, ಆರ್ಡೆಂಟ್ ಇನ್ವೆಸ್ಟರ್ಸ್ ಎಲ್ಎಲ್ ಸಿ, 9 ಯುನಿಕಾರ್ನ್, ಡಿಎಂಐ ಫೈನಾನ್ಸ್, ಎಂಎಸ್ ಫಿನ್‌ಕ್ಯಾಪ್, ಏಂಜಲ್ ಬೇ, ರತ್ನಾ ಫಿನ್ ಕ್ಯಾಪಿಟಲ್, ನ್ಯೂವಾ ಕ್ಯಾಪಿಟಲ್, ಮತ್ತು ಎಎಆರ್ ಎಎಂ ವೆಂಚರ್ಸ್ ಸೇರಿದಂತೆ ಹೂಡಿಕೆದಾರರಿಂದ ಕಳೆದ ಮೂರು ವರ್ಷಗಳಲ್ಲಿ ಈ ಸಂಸ್ಥೆಯು 3.5 ಕೋಟಿ ಡಾಲರ್ (ಅಂದಾಜು ರೂ 291 ಕೋಟಿ) ಸಂಗ್ರಹಿಸಿದೆ.
“ಕಲಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶದಲ್ಲಿ ಲಿಯೊ1 ಅನ್ನು ಬೆಂಬಲಿಸಲು ನಾನು ರೋಮಾಂಚನಗೊಂಡಿದ್ದೇನೆ.
ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಜೀವನದಲ್ಲಿ ಸಕಾರಾತ್ಮಕವಾಗಿ ಪರಿಣಾಮ ಬೀರುವಂತೆ ಕೆಲಸ ಮಾಡಲು ಅವರ ವಿಧಾನ, ಅಚಲವಾದ ಬದ್ಧತೆ ಮತ್ತು ಉದ್ಯಮಶೀಲತಾ ಮನೋಭಾವವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ” ಎಂದು ಶರ್ಮಾ ಹೇಳಿದ್ದಾರೆ.