

ಮೆಲ್ಬೋರ್ನ್: ಭಾರತ ಚಹಾ ವಿರಾಮದ ವೇಳೆ ಡ್ರಾ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ ರಿಷಭ್ ಪಂತ್ ಆಡಿದ ಒಂದು ಕೆಟ್ಟ ಹೊಡೆತದಿಂದಾಗಿ ವಿಕೆಟ್ ಕೈಚೆಲ್ಲಿದ್ದರಿಂದ ಭಾರತವೂ ದಿಢೀರ್ ಕುಸಿತ ಕಂಡು ಸೋಲು ಕಾಣಬೇಕಾಯಿತು. ಹೀಗಾಗಿ ಪಂತ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ನಾಯಕ ರೋಹಿತ್ ಶರ್ಮ, "ಪಂತ್ ತನ್ನಿಂದ ತಂಡಕ್ಕೆ ಏನು ಬೇಕಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದು ಹೇಳಿದ್ದಾರೆ.
ಮೊದಲ ಇನಿಂಗ್ಸ್ನಲ್ಲೂ ಪಂತ್ ಕೆಟ್ಟ ಹೊಡೆತಕ್ಕೆ ವಿಕೆಟ್ ಕೈಚೆಲ್ಲಿದ್ದಕ್ಕೆ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕಿಡಿಕಾರಿದ್ದರು. ಪಂತ್ ಆಕ್ರಮಣಕಾರಿ ತಂಡಕ್ಕೆ ಈ ಹಿಂದೆ ಯಶಸ್ಸು ತಂದುಕೊಟ್ಟಿದೆ. ಆದರೆ ಪಂತ್ ಆಕ್ರಮಣ ಮತ್ತು ತಾಳ್ಮೆಯ ಆಟದ ನಡುವೆ ಸಮತೋಲನ ಕಂಡುಕೊಳ್ಳಬೇಕಾಗಿದೆ. ಎದುರಾಳಿ ಪಂದ್ಯ ಕಸಿದುಕೊಳ್ಳುವ ಹಂತದಲ್ಲಿ ರಿಸ್ಕ್ ತೆಗೆದುಕೊಳ್ಳುವುದನ್ನು ನಿಯಂತ್ರಣದಲ್ಲಿಡಬೇಕಾಗಿದೆ ಎಂದು ರೋಹಿತ್ ಹೇಳಿದ್ದಾರೆ.