ನವದೆಹಲಿ: ಐಪಿಎಲ್ 18ನೇ ಆವೃತ್ತಿ ಆರಂಭವಾಗಲೂ ಇನ್ನೂ ಬಹಳಷ್ಟು ಸಮಯವಿದ್ದರೂ, ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಪ್ರತಿದಿನ ಒಂದಲ್ಲ ಒಂದು ಸುದ್ದಿ ಐಪಿಎಲ್ ಕುರಿತು ಬರುತ್ತಲೇ ಇದೆ.
ಬಿಸಿಸಿಐ ಮುಂದಿನ ಸೀಸನ್ಗೂ ಮುನ್ನ ಮೆಗಾ ಹರಾಜು ನಡೆಸಲಿದೆ. ಇದೇ ವಿಚಾರವಾಗಿ ಇತ್ತೀಚೆಗಷ್ಟೇ ಹತ್ತು ತಂಡಗಳ ಮಾಲೀಕರೊಂದಿಗೆ ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ನಿಯಮಗಳ ಕುರಿತು ಸಭೆ ನಡೆಸಿತು. ಈ ಸಭೆಯ ನಂತರ ಆಟಗಾರರ ರೀಟೇನ್ ಮತ್ತು ಬಿಡುಗಡೆ ನೀತಿಯನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಹೊಸ ನಿಯಮಗಳ ನಂತರ ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮ ತಂಡವನ್ನು ತೊರೆಯುವುದು ಖಚಿತ ಎಂಬ ವರದಿಗಳಿವೆ. ಈ ಹಿಂದೆಯೂ ಈ ಬಗ್ಗೆ ಗುಸುಗುಸು ಕೇಳಿ ಬಂದಿದ್ದರೂ ಇತ್ತೀಚೆಗೆ ಈ ವದಂತಿ ಬಲವಾಗತೊಡಗಿದೆ.
ಮುಂಬೈ ಇಂಡಿಯನ್ಸ್‌ನಿಂದ ರೋಹಿತ್ ಹೊರಬಂದರೆ, ಅವರನ್ನು ಖರೀದಿ ಮಾಡಲು ಹಲವು ತಂಡಗಳು ಆಸಕ್ತಿ ತೋರಿಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೂಡ ಮುಂಚೂಣಿಯಲ್ಲಿದೆ. ರೋಹಿತ್ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸಿದರೆ ಅವರಿಗಾಗಿ ಎಷ್ಟು ಕೋಟಿ ಬೇಕಾದರೂ ಖರ್ಚು ಮಾಡಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಿದ್ಧವಾಗಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಹೇ ಸಿಬಿ ಆಸ್ಕ್ ಡಿಕೆ’ ಎಂಬ ಕ್ರಿಕ್ಬಝ್ ಶೋನಲ್ಲಿ ಡಿಕೆ ನೆಟ್ಟಿಗರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.
ರೋಹಿತ್ ಶರ್ಮ ಆರ್‌ಸಿಬಿ ತಂಡದ ನಾಯಕನಾದರೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಲಾಯಿತು. ಆದರೆ, ಈ ಪ್ರಶ್ನೆಗೆ ಉತ್ತರಿಸದೇ ದಿನೇಶ್ ಕಾರ್ತಿಕ್ ಮೌನವಾದರು. ಏನು ಹೇಳಬೇಕೆಂದು ಅವರಿಗೆ ಅರ್ಥವಾಗಲಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಡಿಕೆ ಪ್ರತಿಕ್ರಿಯೆ ಪ್ರಕಾರ ರೋಹಿತ್ ಶರ್ಮ ಆರ್ಸಿಬಿಗೆ ಬರಲಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಏಕೆಂದರೆ, ಈ ವಿಷಯವನ್ನು ಲೀಕ್ ಮಾಡಬಾರದು ಎನ್ನುವ ಉದ್ದೇಶದಿಂದ ಡಿಕೆ ಸೈಲೆಂಟ್ ಆದರು ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು.
What changes should #India make ahead of #ChampionsTrophy? 🤔
Why did #Rohit & Co. struggle against spinners❓#LaapataaLadies to #Maharaja: A special binge-watch list for cricketers! 🎦@DineshKarthik talks about it all, only on #heyCB, here ⬇️ pic.twitter.com/e6Q2ipzZei
— Cricbuzz (@cricbuzz) August 11, 2024
ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ತನ್ನನ್ನು ಸಂಪರ್ಕಿಸದೆ ನೇರವಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿದ್ದು ರೋಹಿತ್‌ಗೆ ನೋವಾಗಿದೆ. ಅದಕ್ಕಾಗಿಯೇ ಅವರು ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ರೋಹಿತ್ ತಮ್ಮ ನಾಯಕತ್ವದಲ್ಲಿ ಮುಂಬೈ ತಂಡಕ್ಕೆ ಐದು ಕಪ್‌ಗಳನ್ನು ನೀಡಿರುವುದು ಗೊತ್ತೇ ಇದೆ. ಮುಂದಿನ ಸೀಸನ್ನಲ್ಲಿ ರೋಹಿತ್ ನಿಜವಾಗಿಯೂ ಆರ್‌ಸಿಬಿ ನಾಯಕನಾಗಿ ಆಡಿದರೆ ಆರ್‌ಸಿಬಿ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಪಡೆಯುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ, ರೋಹಿತ್ ಆರ್‌ಸಿಬಿ ಬರುತ್ತಾರಾ ಎಂಬುದನ್ನು ತಿಳಿಯಲು ಮೆಗಾ ಹರಾಜುವರೆಗೂ ಕಾಯಲೇಬೇಕಿದೆ. (ಏಜೆನ್ಸೀಸ್)
ಅವಳು ನಾಯಿಯಾಗಿ ಹುಟ್ಟಿದರೂ ಪರವಾಗಿಲ್ಲ! ಸಮಂತಾ ಬಗ್ಗೆ ಶೋಭಿತಾ ಪೋಸ್ಟ್ ವೈರಲ್
ಹೆಂಡ್ತಿಗೆ ಫೋನ್ ಕೊಟ್ಟು ಎಂದಾದರೂ ಸಿಕ್ಕಿಬಿದ್ದಿದ್ದೀರಾ? ಅಕ್ಷಯ್ ಕುಮಾರ್ ಕೊಟ್ಟ ಉತ್ತರ ವೈರಲ್