More

    ‘ರಾಬರ್ಟ್​’ ಟ್ರೇಲರ್​ಗೆ ಕಾಯ್ತಿದ್ದಾರೆ ದರ್ಶನ್​ ಫ್ಯಾನ್ಸ್​ …

    ಬೆಂಗಳೂರು: ದರ್ಶನ್​ ಅಭಿನಯದ ‘ರಾಬರ್ಟ್​’ ಚಿತ್ರತಂಡದಿಂದ ಏನೋ ಬಿಡುಗಡೆಯಾಗಿ ಬಹಳ ದಿನಗಳಾದವು ಎಂದು ಅಭಿಮಾನಿಗಳು ಯೋಚಿಸುವಷ್ಟರಲ್ಲೇ, ಚಿತ್ರತಂಡದವರು ಬಿಡುಗಡೆಯ ದಿನಾಂಕ ಘೋಷಿಸುವುದರ ಜತೆಗೆ, ಚಿತ್ರದ ತೆಲುಗು ಟೀಸರ್​ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದರು. ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳಿರುವಾಗ, ಟ್ರೇಲರ್​ ಇನ್ನೂ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದವರಿಗೆ ಉತ್ತರವಾಗಿ, ನಾಳೆ (ಫೆಬ್ರವರಿ 16) ‘ರಾಬರ್ಟ್​’ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು

    ನಾಳೆ ದರ್ಶನ್​ ಅವರ ಹುಟ್ಟುಹಬ್ಬ ಈ ಸಂದರ್ಭದಲ್ಲಿ ಚಿತ್ರದ ಟ್ರೇಲರ್​ ಬಿಡುಗಡೆಯಾಗುತ್ತಿದೆ. ದರ್ಶನ್​ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬೇಸರದಲ್ಲಿರುವ ಅವರ ಅಭಿಮಾನಿಗಳಿಗೆ, ‘ರಾಬರ್ಟ್​’ ಚಿತ್ರದ ಟ್ರೇಲರ್​ ಬಿಡುಗಡೆಯಾಗುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ಮಂಗಳವಾರ ಬೆಳಿಗ್ಗೆ 10 ಗಂಟೆ ಐದು ನಿಮಿಷಕ್ಕೆ ಟ್ರೇಲರ್​, ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಈಗ ಕೃಷಿ ಇಲಾಖೆಯ ರಾಯಭಾರಿ

    ‘ರಾಬರ್ಟ್​’ ಚಿತ್ರದ ಕೆಲಸಗಳೆಲ್ಲಾ ಮುಗಿದಿದ್ದು, ಮಾರ್ಚ್​ 11ರಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ದರ್ಶನ್​, ಆಶಾ ಅಲ್ಲದೆ ವಿನೋದ್​ ಪ್ರಭಾಕರ್​, ಜಗಪತಿ ಬಾಬು ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಈಗಾಗಲೇ ‘ಶ್ರೀರಾಮ್​’ ಎಂಬ ಹಾಡು ಹಿಟ್​ ಆಗಿದೆ.

    ಪ್ರೇಮಿಗಳ ದಿನಕ್ಕೆ ಪ್ರೀತಿಯ ಉಡುಗೊರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts