ಶ್ರೀಮನ್ನಾರಾಯಣನ ನಂತರ ರಾಬರ್ಟ್​ನ ಜೈಶ್ರೀರಾಮ್​ ಹಾಡಿನ ಸಿಗ್ನೇಚರ್​ ಸ್ಟೆಪ್​ ವೈರಲ್​

robert
Published on

ಬೆಂಗಳೂರು: ಅವನೇ ಶ್ರೀಮನ್ನಾರಾಣ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ ಸಿನಿಮಾ. ಸಿನಿ ರಸಿಕರು, ಯುವಜನತೆ ಸೇರಿದಂತೆ ಅನೇಕರು 'ಇದು ಚರಿತ್ರೆ ಸೃಷ್ಟಿಸೊ ಅವತಾರ...' ಎನ್ನುತ್ತಾ ಚಿತ್ರದ ಸಿಗ್ನೇಚರ್​ ಸ್ಟೆಪ್​ ಹಾಕಿದ್ದರು. ಇದೀಗ ರಾಬರ್ಟ್​ನ ಜೈ ಶ್ರೀರಾಮ್​ ಹಾಡು ಕೂಡ ಸಖತ್​ ಸುದ್ದಿ ಮಾಡಲಾರಂಭಿಸಿದೆ.

ಸಿನಿ ರಸಿಕರು, ದರ್ಶನ್​ ಅಭಿಮಾನಿಗಳು ಸೇರಿದಂತೆ ಅನೇಕರು ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದ ಜೈ ಶ್ರೀರಾಮ್​ ಹಾಡಿನ ಸಿಗ್ನೇಚರ್​ ಸ್ಟೆಪ್​ಗೆ ಹೆಜ್ಜೆ ಹಾಕುತ್ತಿದ್ದಾರೆ. ಟ್ವಿಟ್ಟರ್​, ಟಿಕ್​ಟಾಕ್​ ಸೇರಿ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೃತ್ಯದ ವಿಡಿಯೋ ತುಣುಕನ್ನು ಹಾಕಿ, ಡಿ ಬಾಸ್​ಗೆ ಆಲ್​ ದಿ ಬೆಸ್ಟ್​ ಹೇಳಲಾರಂಭಿಸಿದ್ದಾರೆ.

ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ನಟ ದರ್ಶನ್​ ಅವರ ಬಹುನಿರೀಕ್ಷಿತ ಚಿತ್ರ. ಏಪ್ರಿಲ್​ 9ರಂದು ಸಿನಿಮಾ ತೆರೆ ಕಾಣಲಿದ್ದು, ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಚಿತ್ರದ ಎರಡನೇ ಹಾಡಾಗಿರುವ ಜೈ ಶ್ರೀರಾಮ್​ ಮೊನ್ನೆ (ಮಾ.9) ಬಿಡುಗಡೆಗೊಂಡಿದ್ದು, ಅದರಲ್ಲಿ ದರ್ಶನ್​ ಹನುಮಂತನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್​ ನಟಿ ಆಶಾ ಭಟ್​ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net