

ಶಿವಮೊಗ್ಗ; ಶಿವಮೊಗ್ಗ ಹೊರವಲಯದ ಪೊಲೀಸ್ ಲೇಔಟ್ ನಲ್ಲಿ ದರೋಡೆಕೋರರ ಗುಂಪೊಂದು ಪುಂಡಾಟ ನಡೆಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಈ ವೇಳೆ ಓರ್ವ ದರೋಡೆಕೋರರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇಂದು ಸಂಜೆ ಪೊಲೀಸ್ ಲೇ ಔಟ್ ಬಳಿ ಬೈಕ್ ಗಳನ್ನು ಅಡ್ಡಗಟ್ಟಿ ಬೈಕ್ ಸವಾರರನ್ನು ದರೋಡೆಕೋರರು ದರೋಡೆ ಮಾಡುತ್ತಿದ್ದರು.
ಈ ವೇಳೆ ಸ್ಥಳೀಯರು ದರೋಡೆಕೋರರನ್ನು ಹಿಡಿಯಲು ಮುಂದಾಗಿದ್ದಾರೆ. ಆಗ ದರೋಡೆಕೋರರು ಸ್ಥಳೀಯರ ಕಾರನ್ನು ಜಖಂ ಮಾಡಿ ಮನೆಗಳಿಗೆ ನುಗ್ಗಿ ಮಹಿಳೆಯರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರೆಲ್ಲಾ ಒಂದಾಗಿ ಓರ್ವ ದರೋಡೆಕೋರನನ್ನು ಸೆರೆ ಹಿಡಿದಿದ್ದಾರೆ.
ಸೆರೆಹಿಡಿದ ದರೋಡೆಕೋರನನ್ನು ಸ್ಥಳೀಯರು ತುಂಗಾನಗರ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಯಾವಾಗ ಎಲ್ಲ ಸ್ಥಳೀಯರು ಒಟ್ಟಾಗಿ ಬಂದರೋ ಆಗ ಇನ್ನುಳಿದ ನಾಲ್ವರು ದರೋಡೆಕೋರರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.