

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕೋಪಯೋಗಿ ಇಲಾಖೆ ವತಿಯಿಂದ ಫೆ. 17ರಿಂದ ಒಂದು ವಾರ ಕಾಲ ಇಲಾಖೆ ಎಲ್ಲ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 2024-25ನೇ ಸಾಲಿನ ರಸ್ತೆ ಸಂಚಾರ ಗಣತಿ ಏರ್ಪಡಿಸಲಾಗಿದೆ.
ಈ ಸಮೀಕ್ಷೆಯಿಂದ ಸಂಗ್ರಹಿಸಲಾಗುವ ರಸ್ತೆಯ ವಾಹನ ಸಾಂದ್ರತೆ, ರಸ್ತೆ ಉಪಯೋಗಿಸುವ ಸವಾರರ ಸಂಖ್ಯೆ. ರಸ್ತೆ ಸಂಚಾರ ತೀವ್ರತೆಯಂತಹ ಉಪಯುಕ್ತ ಮಾಹಿತಿಯಿಂದ ಮುಂಬರುವ ದಿನಮಾನಗಳಲ್ಲಿ ಕೈಗೊಳ್ಳಲಾಗುವ ರಸ್ತೆ ಅಗಲೀಕರಣ, ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳ ಮೂಲಕ ರಸ್ತೆಗಳನ್ನು ಉತ್ತಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಅನಕೂಲಕರವಾಗುತ್ತದೆ.
ಈ ಗಣತಿಯನ್ನು ಲೋಕೋಪಯೋಗಿ ಇಲಾಖೆಯ ರಸ್ತೆಗಳ ಬದಿಗಳಲ್ಲಿ ತಾತ್ಕಾಲಿಕವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕೈಗೊಳ್ಳುತ್ತಿದ್ದು, ಈ ರಸ್ತೆ ಸಂಚಾರ ಗಣತಿ ಕೇಂದ್ರಗಳ ಹತ್ತಿರ ಜನರು ವಾಹನಗಳನ್ನು ನಿಧಾನವಾಗಿ ಚಲಾಯಿಸುವ ಮೂಲಕ ಸಹಕಾರ ನೀಡುವುದು ಅಗತ್ಯ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.