

ಮೂಲ್ಕಿ: ಸರಿಯಾದ ಇನ್ಶೂರೆನ್ಸ್, ಡ್ರೈವಿಂಗ್ ಲೈಸೆನ್ಸ್, ವಾಹನದ ದಾಖಲೆಗಳು ಇಲ್ಲದೆ ಅಜಾಗರೂಕತೆಯ ಪ್ರಯಾಣದ ಸಂದರ್ಭ ಅಪಘಾತವಾಗಿ ಎಷ್ಟೋ ಮಂದಿ ಅಪಾಯಕ್ಕೆ ಗುರಿಯಾಗಿದ್ದು, ಪ್ರಯಾಣದ ಬಗ್ಗೆ ಗಮನವಿರಲಿ ಎಂದು ಮಂಗಳೂರು ಸಾರಿಗೆ ವಿಭಾಗ ನಿರೀಕ್ಷಕಿ ಕವಿತಾ ಹೇಳಿದರು.
ಉಪ ಸಾರಿಗೆ ಆಯುಕ್ತರು, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವತಿಯಿಂದ ಮೂಲ್ಕಿಯ ಕಾರ್ನಾಡಿನಲ್ಲಿ ರಸ್ತೆ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಲ್ಕಿ ತಾಲೂಕಿನ ಚಾಲನಾ ತರಬೇತಿ ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.