More

    ಕಾಮಗಾರಿ ಸ್ಥಗಿತ ಸಂಕಷ್ಟ

    ನಿಶಾಂತ್ ಬಿಲ್ಲಂಪದವು ವಿಟ್ಲ

    ರಸ್ತೆ ಇಕ್ಕೆಲ ಕೃಷಿ ಜಮೀನು ಇರುವ ಕಾರಣ ವಿಟ್ಲ ಪೇಟೆ ಭಾಗದಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದ್ದು,ಮೋರಿ ನಿರ್ಮಾಣ ಸೇರಿ ಕಾಮಗಾರಿ ಸಂದರ್ಭ ಅಗೆದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು. ಜನರ ಸಮಸ್ಯೆ ಕಂಡು ತಾತ್ಕಾಲಿಕ ದುರಸ್ತಿಗೆ ಗುತ್ತಿಗೆದಾರ ಮುಂದಾಗಿದ್ದು,ಕಳಪೆ ಕಾಮಗಾರಿಯ ಆರೋಪ ಹೊರಿಸಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಜನರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

    ಕಡೂರು-fಕಾಞಂಗಾಡು ಅಂತಾರಾಜ್ಯ ಹೆದ್ದಾರಿಯ ಒಕ್ಕೆತ್ತೂರಿನಿಂದ ವಿಟ್ಲ ಪೇಟೆಯಾಗಿ ಕಾಶಿಮಠದವರೆಗೆ ರಸ್ತೆ ಅಭಿವೃದ್ಧಿಗೆ ಸರ್ಕಾರದ ಅಪೆಂಡಿಕ್ಸ್ ಇ ಯೋಜನೆಯಲ್ಲಿ 5ಕೋಟಿ ರೂ.ಬಿಡುಗಡೆಯಾಗಿದೆ.ಕೆಲಸ ಆರಂಭಿಸುತ್ತಿದ್ದಂತೆ ರಸ್ತೆ ಅಕ್ಕಪಕ್ಕದ ಜಮೀನು ಮಾಲೀಕರು ತಮ್ಮ ವರ್ಗ ಜಾಗ ಎಂದು ರಸ್ತೆಯಲ್ಲೇ ಬೇಲಿ ಅಳವಡಿಸಿದ್ದರು.ಈ ನಡುವೆ ಬೊಬ್ಬೆಕೇರಿ,ಕಾಶಿಮಠದ ಭಾಗದಲ್ಲಿ ಮೋರಿ ನಿರ್ಮಾಣ,ವಿಸ್ತರಣೆ,ಚರಂಡಿ ಕಾಮಗಾರಿ ನಡೆಸಲು ರಸ್ತೆ ಅಗೆಯಲಾಗಿತ್ತು.

    ಈ ನಡುವೆ ಕೆಲವು ಜಮೀನು ಮಾಲೀಕರು ತಮ್ಮ ವರ್ಗ ಜಾಗವನ್ನು ಅಕ್ರಮವಾಗಿ ಪ್ರವೇಶಿದ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಕಾಮಗಾರಿಗೆ ತಡೆ ತಂದಿದ್ದರು.ಇದರಿಂದ ರಸ್ತೆಯಲ್ಲಿ ಆದ ಗುಂಡಿಗಳಿಂದ ವಾಹನ ಸವಾರರು ನಿತ್ಯ ಸಂಚಾರಕ್ಕೆ ಸಮಸ್ಯೆ ಪಡುವಂತಾಗಿತ್ತು.ಹಲವು ಮಂದಿಯ ದೂರಿನ ಹಿನ್ನೆಲೆಯಲ್ಲಿ ಬೃಹತ್ ಗುಂಡಿಗಳಿಗೆ ಜಲ್ಲಿ ತುಂಬಿ ಅದರ ಮೇಲೆಗೆ ತಾತ್ಕಾಲಿಕ ಡಾಂಬರು ಹಾಕುವ ಕಾರ್ಯಕ್ಕೆ ಗುತ್ತಿಗೆದಾರ ಮುಂದಾಗಿದ್ದರು.

    ಹಿರಿಯ ಅಧಿಕಾರಿಗಳಿಗೆ ದೂರು

    ಸಮರ್ಪಕ ಮಾಹಿತಿ ಇಲ್ಲದವರು ಇದನ್ನೇ ಕಳಪೆ ಕಾಮಗಾರಿ,ಚಪ್ಪಡಿ ಕೆಲಸ ಎಂದು ಬಿಂಬಿಸಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು.ಇದರಿಂದ ತೇಪೆ ಕಾರ್ಯವನ್ನು ಸೋಮವಾರ ತಡೆಹಿಡಿದ ಲೋಕೋಪಯೋಗಿ ಇಲಾಖೆ ವಾಸ್ತವ ತಿಳಿದ ಬಳಿಕ ಮಂಗಳವಾರ ಮತ್ತೆ ತೇಪೆ ಕಾರ್ಯ ಮುಂದುವರಿಸಲು ಗುತ್ತಿಗೆದಾರನಿಗೆ ಸೂಚನೆಯನ್ನು ನೀಡಿದೆ.ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಸರಿಯಾಗಿರುವಂತೆ ನೋಡಿಕೊಂಡಿದ್ದಾರೆ.

    ದಾರಿ ಮಧ್ಯೆ ಹಾಳಾದ ರೋಲರ್

    ಜನವರಿ ಮೊದಲ ವಾರದಲ್ಲೇ ಗುಂಡಿಗಳನ್ನು ಮುಚ್ಚುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಮಸ್ಯೆ ಹೇಳಿಕೊಂಡವರಿಗೆ ಭರವಸೆ ನೀಡಿತ್ತು.ಆದರೆ ಮಳೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ಗುಣಮಟ್ಟ ಕುಸಿಯಬಾರದೆಂದು ಕೆಲಸ ಮುಂದೂಡಲಾಗಿತ್ತು.ಈ ನಡುವೆ ಸ್ಥಳೀಯರು ಗುಂಡಿಗಳಿಗೆ ಮಣ್ಣು ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ.ಇದನ್ನು ಗಮನಿಸಿ ಸೋಮವಾರ ಸಿಬ್ಬಂದಿ ಮಿಶ್ರಣಗೊಂಡ ಡಾಂಬರು ಸಹಿತ ಸ್ಥಳಕ್ಕೆ ಆಗಮಿಸಿದ್ದು,ರೋಲರ್ ದಾರಿ ಮಧ್ಯೆ ಹಾಳಾಗಿದೆ.ಇದರಿಂದ ಮಿಶ್ರಣಗೊಂಡ ಡಾಂಬರನ್ನು ವ್ಯರ್ಥ ಮಾಡುವ ಬದಲಾಗಿ,ರು ಬೃಹತ್ ಗುಂಡಿಗಳಿಗೆ ಹಾಕಿ ಹೋಗಿದ್ದಾರೆ.

    ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

    ಚಪ್ಪಡಿ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮಂಗಳವಾರ ಕೆಟ್ಟುಹೋದ ರೋಲರ್ ಸರಿಪಡಿಸಿ ಸ್ಥಳಕ್ಕೆ ತಂದು ರೋಲ್ ಮಾಡುವ ಮೂಲಕ ತೇಪೆ ಕಾರ್ಯ ಮುಂದುವರಿಸಿದ್ದಾರೆ.5ಕೋಟಿ ರೂ.ವೆಚ್ಚದ ಕಾಮಗಾರಿ ಆರಂಭವಾಗುವ ಸಂದರ್ಭ ಈಗ ಹಾಕಿದ ತೇಪೆಗಳನ್ನು ಕಿತ್ತು ತೆಗೆದು ಮರು ಡಾಂಬರೀಕರಣ ನಡೆಯಲಿದೆ.

    ವಿಜಯವಾಣಿ ವರದಿ ಮಾಡಿತ್ತು

    ರಸ್ತೆ ವಿಸ್ತರಣೆಗೆ ಖಾಸಗಿ ಜಮೀನು ಅಡ್ಡಿಯಾಗುತ್ತಿದ್ದು,ಸರ್ವೇ ನಡೆಸುವ ಸಂದರ್ಭ ತಾಂತ್ರಿಕ ಸಮಸ್ಯೆ ಎದುರಾಗಿತ್ತು.ವೆ ಪ್ರದೇಶವೂ ಖಾಸಗಿ ಜಾಗ ಎಂಬ ಬಗ್ಗೆ ದಾಖಲೆಗಳನ್ನು ಜಮೀನು ಮಾಲೀಕರು ತೋರಿಸಿದ್ದರು.ರಸ್ತೆ ವಿಸ್ತರಣೆಗಿರುವ ಸಮಸ್ಯೆಯನ್ನು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಪರಿಹಾರ ಒದಗಿಸಬೇಕೆಂಬ ನಿಟ್ಟಿನಲ್ಲಿ ವಿಜಯವಾಣಿಈ ಹಿಂದೆ ವರದಿ ಮಾಡಿತ್ತು.

    ದೂರು ಬರುತ್ತಿದ್ದಂತೆ ಮರುಡಾಂಬರು ಮಾಡಲಿರುವ ರಸ್ತೆಯ ತೇಪೆ ಕಾರ್ಯವನ್ನು ಸ್ಥಳದಲ್ಲೇ ನಿಂತು ವೈಜ್ಞಾನಿಕವಾಗಿ ಹಾಕುವ ಕಾರ್ಯ ನಡೆದಿದೆ.ವಿಸ್ತರಣೆ ಕಾರ್ಯಕ್ಕೆ ದೂರವಾಣಿ ಕೇಬಲ್‌ಗಳು ಸಮಸ್ಯೆಯಾಗಿದ್ದು,ಈಗಾಗಲೇ ಇಲಾಖೆಗೆ ಪತ್ರ ಬರೆಯಲಾಗಿದೆ.ಜಾಗದ ತಕರಾರು ನ್ಯಾಯಾಲಯದಲ್ಲಿ ಇರುವ ಕಾರಣ ಕೆಲಭಾಗದಲ್ಲಿ ಚರಂಡಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ.
    -ಜಯಪ್ರಕಾಶ್
    ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್,ಪಿಡಿಬ್ಲುೃಡಿ ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts