More

    ಮುರೂರು, ದೇವರಗುಂಡದಲ್ಲಿ ಆನೆಗಳ ಉಪಟಳ

    ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಆನೆಗಳ ಉಪಟಳ ಮತ್ತೆ ತೀವ್ರಗೊಂಡಿದ್ದು ಬುಧವಾರ ರಾತ್ರಿ ಮುರೂರು ದೇವರಗುಂಡ ಭಾಗದಲ್ಲಿ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ.

    ದೇವರಗುಂಡ ಡಿ.ಸಿ ಬಾಲಚಂದ್ರ ಅವರ ತೋಟಕ್ಕೆ ನುಗ್ಗಿದ ಆನೆಗಳು ನೂರಕ್ಕೂ ಅಧಿಕ ಅಡಕೆ ಹಾಗೂ ಬಾಳೆಗಿಡಗಳನ್ನು ಧ್ವಂಸಗೈದಿವೆ. ಕೆಲವು ತೆಂಗಿನ ಮರಗಳಿಗೂ ಹಾನಿ ಮಾಡಿವೆ. ಹಿಂಡಾನೆಗಳು ಬೆಳೆಗಳನ್ನು ನಾಶಗೊಳಿಸುವ ವೇಳೆ ನೀರಿಗಾಗಿ ಅಳವಡಿಸಲಾಗಿದ್ದ ಪೈಪ್‌ಗಳಿಗೂ ಹಾನಿ ಉಂಟಾಗಿದೆ. ಮತ್ತೊಂದು ಗುಂಪಿನ ಆನೆ ಮಂಡೆಕೋಲು ಬೈಲು ಸಮೀಪದ ಎರ್ಕಲ್ಪಾಡಿ ಭಾಗದ ತೋಟಗಳಿಗೂ ನುಗ್ಗಿ ಬೆಳೆಗಳನ್ನು ನಾಶಗೊಳಿಸಿವೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ.

    ಮುರೂರಿನಲ್ಲಿ ಚಿರತೆ ಪ್ರತ್ಯಕ್ಷ

    ಆನೆ ಹಾವಳಿ ನಡುವೆ ಚಿರತೆಯೊಂದು ಮುರೂರು ಭಾಗದಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರಿಗೆ ಆತಂಕ ಉಂಟುಮಾಡಿದೆ. ಕೆಲ ತಿಂಗಳ ಹಿಂದೆ ಇದೇ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸಿತ್ತು. ಆದರೆ ಇದೀಗ ಮತ್ತೆ ಚಿರತೆ ಕಾಣಿಸಿಕೊಂಡು ಕಾಡು ಮೃಗಗಳ ಹಾವಳಿಯಿಂದ ಈ ಭಾಗದ ಜನರು ಕಂಗೆಡುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts