More

    ಪ್ರಪಂಚದ ದೊಡ್ಡಣ್ಣಗಳ ಮಧ್ಯೆ ಭಾರತಕ್ಕೆ ನಂ.1 ಸ್ಥಾನ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಣ್ಣನೆ

    ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
    ಭಾರತ 2047ರಲ್ಲಿ ವಿಕಸಿತ ದೇಶವಾಗಬೇಕು. ಪ್ರಪಂಚದ ದೊಡ್ಡಣ್ಣಗಳ ಮಧ್ಯೆ ನಂ. 1 ಸ್ಥಾನದಲ್ಲಿ ನಿಲ್ಲಬೇಕು. ಅದಕ್ಕಾಗಿ ದೇಶದ 140 ಕೋಟಿ ಜನ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲವಾಗಿ ಹೆಜ್ಜೆಗೆ ಹೆಜ್ಜೆ ಹಾಕಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣ ಉದ್ಯಮ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
    ಕಾಪು ತಾಲೂಕು ಆಡಳಿತ ಸೌಧ ಆವರಣದಲ್ಲಿ ಗುರುವಾರ ನಡೆದ ಕಾಪು ಪುರಸಭಾ ವ್ಯಾಪ್ತಿಯ ವಿಕಸಿತ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು.

    ರಾಜ್ಯ ಸರ್ಕಾರದ ಅಸಹಕಾರ ಆರೋಪ

    ಯಾತ್ರೆ ಸಂದರ್ಭದಲ್ಲಿ ಸ್ಟಾಲ್‌ಗಳನ್ನು ಹಾಕಿ ಜನರಿಗೆ ಮಾಹಿತಿ ಹಾಗೂ ಯೋಜನೆಗೆ ನೋಂದಣಿ ಕುರಿತಂತೆ ದೇಶದ ಎಲ್ಲ ರಾಜ್ಯದ ಜಿಲ್ಲಾಧಿಕಾರಿ ಹಾಗೂ ಸಿಇಒಗಳಿಗೆ ಕೇಂದ್ರ ಸರ್ಕಾರ ತರಬೇತಿ ನೀಡಿತ್ತು. ಕರ್ನಾಟಕದಲ್ಲಿ ನ.14ರಂದು ರಾಜ್ಯ ಸರ್ಕಾರ ರಾಜಕೀಯ ಕಾರಣಕ್ಕೆ ಡಿಸಿ, ಸಿಇಒಗಳಿಗೆ ಸಹಕಾರ ಕೊಡದಂತೆ ಸೂಚನೆ ನೀಡಿದೆ ಎಂದು ಶೋಭಾ ಆರೋಪಿಸಿದರು.

    ಲೋಕಸಭಾ ಚುನಾವಣೆ ಬಳಿಕವಾದರೂ ಬದಲಾಗಲಿ

    ರಾಜ್ಯದಲ್ಲಿ ಸರ್ಕಾರದ ಸಹಕಾರ ಇಲ್ಲದೇ ಸ್ಟಾಲ್‌ಗಳನ್ನು ಹಾಕಲು ಅವಕಾಶ ಇಲ್ಲವಾಗಿದೆ. ಕಿಸಾನ್ ಸಮ್ಮಾನ್ ಯೋಜನೆ ಕೇಂದ್ರ ಸರ್ಕಾರದ್ದಾರೂ, ತಳಮಟ್ಟದಲ್ಲಿ ರೈತರ ನೋಂದಣಿ ಹಾಗೂ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ರಾಜ್ಯ ಸರ್ಕಾರದಿಂದಲೇ ನಡೆಯಬೇಕಿದ್ದರಿಂದ ಜನ ವಂಚಿತರಾಗಬೇಕಾಗಿದೆ. ಲೋಕಸಭಾ ಚುನಾವಣೆ ಬಳಿಕವಾದರೂ ರಾಜ್ಯ ಮತ್ತು ಕೇಂದ್ರ ಒಟ್ಟು ಸೇರಿ ಅರ್ಹರಿಗೆ ಯೋಜನೆಗಳ ಲಾಭ ನೀಡುವಲ್ಲಿ ಪ್ರಧಾನಿ ಅಪೇಕ್ಷೆಯಂತೆ ಮಾಡುತ್ತಾರೆನ್ನುವ ವಿಶ್ವಾಸವಿದೆ ಎಂದರು.

    ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಮಾತು

    ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಮುದ್ರಾ ಯೋಜನೆ ಅಡಿ ಮಂಜೂರಾದ ಸಾಲ ಸೌಲಭ್ಯ ಆದೇಶ ಪತ್ರ ಹಾಗೂ ಪ್ರಧಾನಮಂತ್ರಿ ಉಜ್ವಲ ಯೋಜನೆಮಡಿ ಮಂಜೂರಾದ ಉಚಿತ ಗ್ಯಾಸ್ ಸಂಪರ್ಕವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಕಸಿತ ಭಾರತ ಸಂಕಲ್ಪಯಾತ್ರೆಯ ಪ್ರಮಾಣವಚನ ಬೋಧಿಸಿದರು.
    ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ತಹಸೀಲ್ದಾರ್ ಪ್ರತಿಭಾ ಆರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ನಬಾರ್ಡ್‌ನ ಸಂಗೀತಾ ಕರ್ತ, ಕೆನರಾ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಸತ್ಮೇಂದರ್ ಸಿಂಗ್, ಬ್ಯಾಂಕ್ ಆಫ್ ಬರೋಡಾ ಉಪ ಪ್ರಾದೇಶಿಕ ಪ್ರಬಂಧಕ ವಿದ್ಯಾಧರ ಶೆಟ್ಟಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ್ ಹಾಗೂ ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಪ್ರಬಂಧಕ ಬೀರ್‌ಸಾಬ್ ಪಿಂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಎಸ್.ಡಿ. ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts