More

    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ

    ಪ್ರಶಾಂತ ಭಾಗ್ವತ ಉಡುಪಿ
    ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಉಡುಪಿ ಹಾಗೂ ಹೊರಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ಲಭಿಸಿದ್ದು, ಭಾರಿ ಪ್ರಮಾಣದಲ್ಲಿ ಹೊರೆಕಾಣಿಕೆಯಾಗಿ ಬಂದ ಸುವಸ್ತುಗಳು ಉಗ್ರಾಣ ಸೇರಿವೆ. ಜ.9ರಿಂದ 17ರವರೆಗೆ ಹೊರೆಕಾಣಿಕೆ ಅರ್ಪಣೆಗೆ ಭರ್ಜರಿ ಸ್ಪಂದನೆ ಲಭಿಸಿದೆ.
    ಉಡುಪಿ ಬೈಲಕೆರೆ ಪ್ರದೇಶದಲ್ಲಿ ನಿರ್ಮಿಸಿರುವ ಕನಕ ಮಂಟಪ ಪಕ್ಕದ ಹೊರೆಕಾಣಿಕೆ ಸಂಗ್ರಹದ ಉಗ್ರಾಣ ಸುವಸ್ತುಗಳಿಂದ ಭರ್ತಿಯಾಗಿದೆ. ಭಕ್ತರಿಂದ ಸ್ವೀಕರಿಸಿದ ಹೊರೆಕಾಣಿಕೆ ವಸ್ತುಗಳನ್ನು ಸುಂದರವಾಗಿ ಜೋಡಿಸಲಾಗಿದೆ. ಈ ಉಗ್ರಾಣ ಮ್ಯೂಸಿಯಂನ ರೂಪು ತಳೆದಿದ್ದು ನಿತ್ಯ ನೂರಾರು ಜನ ಇದರ ವೀಕ್ಷಣೆಗೆಂದೇ ಆಗಮಿಸುತ್ತಿದ್ದಾರೆ.
    ಪುತ್ತಿಗೆ ಪರ್ಯಾಯದ ಹಿನ್ನೆಲೆಯಲ್ಲಿ ವಿವಿಧ ಸಮಿತಿ ರಚಿಸಲಾಗಿದ್ದು ಹೊರೆಕಾಣಿಕೆಗೆ ಸುಪ್ರಸಾದ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಹೊರೆಕಾಣಿಕೆ ಸಂಗ್ರಹ ಕಾರ್ಯ ಅಚ್ಚುಕಟ್ಟಾಗಿ ನಡೆದಿದ್ದು, ಒಂಬತ್ತು ದಿನವೂ ಜೋಡುಕಟ್ಟೆಯಿಂದ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಸುವಸ್ತು ಸಮರ್ಪಿಸುವ ಕಾರ್ಯ ನಡೆದಿದೆ.

    ಕೃಷ್ಣನಿಗೆ ಸಮರ್ಪಣೆ

    ಉಗ್ರಾಣದಲ್ಲಿ ಉಡುಪಿ ಕೃಷ್ಣನ ಮಾದರಿ ವಿಗ್ರಹ ಅಳವಡಿಸಲಾಗಿದ್ದು, ಹೊರೆಕಾಣಿಕೆ ತಂದ ಸಮಾಜದ ಮುಖ್ಯಸ್ಥರಿಂದ ಪುತ್ತಿಗೆ ಮಠದ ಪದಾಧಿಕಾರಿಗಳು ಲ ಸ್ವೀಕರಿಸಿ, ದೇವರಲ್ಲಿ ಪ್ರಾರ್ಥಿಸಿ, ಸುವಸ್ತುಗಳನ್ನು ನೀಡಿದ ಭಕ್ತರ ಕುಟುಂಬಕ್ಕೆ ಶ್ರೀಕೃಷ್ಣನ ಅನುಗ್ರಹ ಲಭಿಸಿಲಿ ಎಂದು ಹಾರೈಸಿ, ಹೊರೆಕಾಣಿಕೆ ಸ್ವೀಕರಿಸುವ ಸಂಪ್ರದಾಯ ಅಳವಡಿಸಿಕೊಳ್ಳಲಾಗಿತ್ತು.

    ಗಮನ ಸೆಳೆಯುತ್ತಿದೆ ಉಗ್ರಾಣ

    ಹೊರೆಕಾಣಿಕೆಯ ಉಗ್ರಾಣದಲ್ಲಿ ಎತ್ತಿನಗಾಡಿಯ ಅಕ್ಕಿಮುಡಿ ಇಡಲಾಗಿದ್ದು ಗಮನ ಸೆಳೆಯುತ್ತಿದೆ. ನೂರಾರು ಬಾಳೆಗೊನೆಗಳನ್ನು ಸಾಲಾಗಿ ತೂಗಿಡಲಾಗಿದೆ. ಅನ್ನದಾನಕ್ಕೆ ಬಂದಿರುವ ಸಹಸ್ರ ಸಂಖ್ಯೆಯ ಅಕ್ಕಿ ಚೀಲಗಳನ್ನೂ ಇಡಲಾಗಿದ್ದು, ತಡೆಗೋಡೆ ಅಥವಾ ಸೇತುವೆಯಂತೆ ಕಾಣುತ್ತಿದೆ. ಅಕ್ಕಿಚೀಲಗಳನ್ನೇ ಬಾವಿಯ ಆಕಾರದಲ್ಲಿ ಜೋಡಿಸಿ ಅದರೊಳಗೆ ತೆಂಗಿನಕಾಯಿ ರಾಶಿ ಹಾಕಲಾಗಿದೆ. ತರಕಾರಿಗಳು ಹಾಗೂ ಬೆಲ್ಲದ ರಾಶಿ ಗಮನ ಸೆಳೆಯುತ್ತಿದೆ.

    ಪುತ್ತಿಗೆ ಪರ್ಯಾಯದ ಹೊರೆಕಾಣಿಕೆಗೆ ಉತ್ತಮ ಸ್ಪಂದನೆ ಲಭಿಸಿದೆ. ವಿವಿಧ ಸಮಾಜ, ಜಾತಿ ಸಮುದಾಯ, ಸಂಘ-ಸಂಸ್ಥೆಗಳು, ಸಹಕಾರಿ ಸಂಘಟನೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ, ಬ್ರಾಹ್ಮಣ ಪರಿಷತ್, ನವೋದಯ ಸ್ವಸಹಾಯ ಸಂಘಗಳು ಹೀಗೆ ಅನೇಕರು ಸಹಕರಿಸಿದ್ದಾರೆ. ಹೊರೆಕಾಣಿಕೆ ಸಮರ್ಪಣೆ ಕಾರ್ಯ ಹಬ್ಬದಂತೆಯೇ ಆಚರಿಸಲ್ಪಟ್ಟಿದೆ.
    ಸುಪ್ರಸಾದ ಶೆಟ್ಟಿ
    ಅಧ್ಯಕ್ಷ, ಪುತ್ತಿಗೆ ಪರ್ಯಾಯ ಹೊರೆಕಾಣಿಕೆ ಸಮಿತಿ

    40 ದಿನಗಳಿಂದ ನಮ್ಮ ತೋಟದಲ್ಲಿರುವ ತೆಂಗಿನಮರದಿಂದ ಕಾಯಿ ತೆಗೆಸದೆ ಕೃಷ್ಣನಿಗಾಗಿ ಕಾದಿಟ್ಟಿದ್ದೆ. ಮೊನ್ನೆ 2 ಸಾವಿರ ಕಾಯಿಗಳನ್ನು ತೆಗೆಸಿ ಸೋಮವಾರ ಹೊರೆಕಾಣಿಕೆಗೆ ನೀಡಿದ್ದೇನೆ. ಅನ್ನಬ್ರಹ್ಮನಾದ ಕೃಷ್ಣನ ಪ್ರಸಾದ ಭೋಜನಕ್ಕಾಗಿ ಈ ಕೊಡುಗೆ ನೀಡುವುದರಿಂದ ನನ್ನನ್ನೂ ಸೇರಿಸಿ ಸುವಸ್ತು ನೀಡಿದ ಎಲ್ಲ ಭಕ್ತರಿಗೆ ಧನ್ಯತೆ ಭಾವ ಮೂಡುತ್ತದೆ.
    ರಂಜನ್ ಕಲ್ಕೂರ್
    ಕೋಶಾಧಿಕಾರಿ, ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ

    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ
    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ
    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ
    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ
    ಪರ್ಯಾಯಕ್ಕೆ ಸುವಸ್ತುಗಳ ಪ್ರವಾಹ: ಹೊರೆಕಾಣಿಕೆ ಸಮರ್ಪಣೆಗೆ ಜನರಿಂದ ಭರ್ಜರಿ ಸ್ಪಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts