More

    ದೇಶ, ಈಶ ಸೇವೆಯಲ್ಲಿ ಸಾರ್ಥಕ್ಯ ಕಂಡ ವಿಶ್ವೇಶತೀರ್ಥರು: ಶ್ರೀ ವಿದ್ಯಾಧೀಶ ತೀರ್ಥರು

    ಉಡುಪಿ : ಪೇಜಾವರ ಶ್ರೀ ಕೀರ್ತಿಶೇಷ ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಚತುರ್ಥ ಆರಾಧನೋತ್ಸವದ ಪ್ರಯುಕ್ತ ಉಡುಪಿ ಪೇಜಾವರ ಮಠದಲ್ಲಿ ಭಾನುವಾರ ಗುರುಸಂಸ್ಮರಣಾ ಲಾರ್ಯಕ್ರಮ ನೆರವೇರಿತು.


    ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ದಿವ್ಯಸಾನ್ನನಿಧ್ಯವಹಿಸಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದಿವ್ಯ ಪಾದುಕೆ ಮತ್ತು ಸಾಲಂಕೃತ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿದರು.

    ಶ್ರೀ ವಿದ್ಯಾಧೀಶತೀರ್ಥರು ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿಂದೆ ಅವರ ದೂರದೃಷ್ಟಿ ಮತ್ತು ಕ್ರತುಶಕ್ತಿಯ ಪರಿಣಾಮ ಭವ್ಯ ರಾಮಂಮದಿರ ನಿರ್ಮಾಣದ ದಿವ್ಯ ಸಂದರ್ಭವನ್ನು ದೇಶಕ್ಕೆ ತಂದುಕೊಟ್ಟಿದೆ . ದೇಶ ಸೇವೆ ಮತ್ತು ಈಶ ಸೇವೆಯಲ್ಲಿ ಜೀವನದ ಸಾರ್ಥಕ್ಯವನ್ನು ಕಂಡಿದ್ದಾರೆ. ಮಹಾನುಭಾವರ ಸ್ಮರಣೆ ಅತ್ಯಂತ ಶ್ರೇಯಸ್ಕರ ಎಂದು ಹೇಳಿದರು.


    ಮಠದ ದಿವಾನರಾದ ಎಂ ರಘುರಾಮಾಚಾರ್ಯ , ಸಿ ಇ ಒ ಸುಬ್ರಹ್ಮಣ್ಯ ಭಟ್ ಮತ್ತು ಮಠದ ವಿದ್ಯಾರ್ಥಿಗಳು ಉಭಯ ಶ್ರೀಗಳವರನ್ನು ಆದರಿಂದ ಬರಮಾಡಿಕೊಂಡು ಭಕ್ತಿ ಗೌರವ ಸಮರ್ಪಿಸಿದರು . ವಿದ್ವಾಂಸರಾದ ರಾಮಚಂದ್ರ ಭಟ್ ಗೋಪಾಲ ಜೋಯಿಸ್ , ಬಾಲಕೃಷ್ಣ ಭಟ್ ನೀರೆ , ಹೆರ್ಗ ಹರಿಪ್ರಸಾದ , ನರಸಿಂಹ ಭಟ್ , ವಿಧಾನ‌ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರೊ ಎಂ ಬಿ ಪುರಾಣಿಕ್ , ಮಾಜಿ ಶಾಸಕ ರಘುಪತಿ ಭಟ್ ಉಮೇಶ್ ರಾವ್ , ಮುರಲಿ ಕಡೆಕಾರ್, ಎಸ್ ವಿ ಭಟ್ ಗಂಗಾಧರ ರಾವ್ , ಪದ್ಮನಾಭ ಭಟ್ , ರಾಘವೇಂದ್ರ ಕಿಣಿ , ಮಠದ ಕೊಟ್ಟಾರಿ ಸಂತೋಷ ಭಟ್ , ವ್ಯವಸ್ಥಾಪಕ ಇಂದುಶೇಖರ , ವೇದವ್ಯಾಸ ಭಟ್ ಕೃಷ್ಣ ಸಾಮಗ , ಸುಬ್ರಹ್ಮಣ್ಯ ಹೆಬ್ಬಾರ್ ಮೊದಲಾದವರಿದ್ದರು . ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts