ರಸ್ತೆ ಪ್ರಯಾಣವೇ ಕಷ್ಟ : ಮಣ್ಣಿನ ರಸ್ತೆ, ಧೂಳಿನ ಪ್ರಯಾಣ : ಜನಪ್ರತಿನಿಧಿಗಳ ಭರವಸೆಗೆ ಕಾದು ಸುಸ್ತಾದ ಸ್ಥಳೀಯರು

45
Published on

ಅನ್ಸಾರ್ ಇನೊಳಿ ಉಳ್ಳಾಲ

ಮಣ್ಣಿನಿಂದಾವೃತ್ತ ಕಚ್ಚಾರಸ್ತೆ.. ಅಲ್ಲಲ್ಲಿ ಸಿಗುವ ಕಲ್ಲುಗಳ ರಾಶಿ.. ಈ ರಸ್ತೆಯಲ್ಲಿ ಪ್ರಯಾಣವೇ ಕಷ್ಟ.. ಎಚ್ಚರ ತಪ್ಪದಿದ್ದರೂ ದ್ವಿಚಕ್ರ ವಾಹನ ಸವಾರರಿಗೆ ಆತಂಕ.. ಇದು ಪಜೀರ್ ಗ್ರಾಮದ ಒಳರಸ್ತೆಯ ಭಯಾನಕ ಚಿತ್ರಣ..

ಪಜೀರ್ ಗ್ರಾ.ಪಂ. ವ್ಯಾಪ್ತಿಯ ಪರಂಚಿಲ್-ವಜಲಗುಡ್ಡೆ ರಸ್ತೆಯನ್ನು 30 ವರ್ಷಗಳ ಹಿಂದೆ ಸ್ಥಳೀಯರೇ ನಿರ್ಮಿಸಿದ್ದರು. ಈ ರಸ್ತೆ ಆಶ್ರಯಿಸಿ 100 ರಷ್ಟು ಮನೆಗಳಿವೆ. ಒಂದು ಕಿ.ಮೀ.ನಷ್ಟಿರುವ ರಸ್ತೆ ಸರ್ಕಾರಿ ಮತ್ತು ಖಾಸಗಿ ಜಮೀನನ್ನೂ ಹೊಂದಿದೆ. ರಸ್ತೆ ಮಧ್ಯಭಾಗದಲ್ಲಿ 40 ಮೀಟರ್‌ನಷ್ಟು ಕಾಂಕ್ರೀಟ್ ಹಾಕಲಾಗಿದೆ. ಆದರೆ ಆರಂಭದಲ್ಲೇ ಸಿಗುವ ಕಲ್ಲುಗಳ ರಾಶಿಯಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ. ಬೇಸಿಗೆಯಲ್ಲಿ ಈ ರಸ್ತೆ ಧೂಳುಮಯವಾದರೆ, ಮಳೆಗಾಲದಲ್ಲಂತೂ ಈ ರಸ್ತೆ ಸಂಚಾರ ದೇವರಿಗೇ ಪ್ರೀತಿ ಎನ್ನುವಂತಿದೆ.

ರಸ್ತೆ ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿ ಗ್ರಾಮಕ್ಕೆ ಕೋಟಿ ಅನುದಾನದ ನೀಡಲು ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರೆ. ಪಜೀರ್ ಗ್ರಾಪಂಗೆ ಕೋಟಿ ಅನುದಾನ ಬಂದರೆ ಇಲ್ಲಿರುವ ಐದು ವಾರ್ಡ್‌ಗಳಿಗೆ ತಲಾ ಇಪ್ಪತ್ತು ಲಕ್ಷ ರೂ.ಅನುದಾನ ಸಿಗಲಿದೆ. ಆ ಹಣದಲ್ಲಾದರೂ ರಸ್ತೆ ಅಭಿವೃದ್ಧಿಪಡಿಸಿ ಎನ್ನುವುದು ಸ್ಥಳೀಯರ ಬೇಡಿಕೆ.

30 ವರ್ಷಗಳ ಹಿಂದೆ ಸ್ಥಳೀಯರೇ ರಸ್ತೆ ನಿರ್ಮಿಸಿದ್ದರು. ಈ ಭಾಗದಲ್ಲಿ 100ರಷ್ಟು ಮನೆಗಳಿವೆ. ಕಾಂಕ್ರೀಟ್ ಕಾಮಗಾರಿ ಮಾಡುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಿಕ್ಕಿದ್ದು ಕೇವಲ ಭರವಸೆ ಮಾತ್ರ. ಈ ಬಾರಿಯಾದರೂ ನಮ್ಮ ಬೇಡಿಕೆ ಈಡೇರುವ ನಿರೀಕ್ಷೆಯಲ್ಲಿದ್ದೇವೆ. ಜೊಸ್ಸಿ ಕ್ರಾಸ್ತ, ಸ್ಥಳೀಯ ನಿವಾಸಿ ಗ್ರಾಪಂ ಅನುದಾನದಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಲು ಅಸಾಧ್ಯ. ಈ ಬಾರಿ ಶಾಸಕರು ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದು, ಅದರಲ್ಲಿ ಈ ರಸ್ತೆ ಕಾಂಕ್ರೀಟೀಕರಣಕ್ಕೆ ಎಷ್ಟು ಹಣ ಮೀಸಲಿಡಬೇಕೆನ್ನುವುದನ್ನು ಶಾಸಕರೇ ತೀರ್ಮಾನಿಸಲಿದ್ದಾರೆ. ಅನುದಾನ ಎಲ್ಲ ವಾರ್ಡ್‌ಗಳಿಗೂ ಮೀಡಲಿಬೇಕಿರುವುದರಿಂದ ಒಂದೇ ಹಂತದಲ್ಲಿ ರಸ್ತೆ ಪೂರ್ಣವಾಗಿ ಕಾಂಕ್ರೀಟ್ ನಡೆಸುವುದು ಕಷ್ಟ. ಮಹಮ್ಮದ್ ರಫೀಕ್, ಪಜೀರ್ ಗ್ರಾ.ಪಂ. ಅಧ್ಯಕ್ಷ https://www.vijayavani.net/beluvai-gram-sabha https://www.vijayavani.net/rural-development-project-tuition-class-concluding

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net