ಕಡಬ: ಕಡಬ–ಪಂಜ ಸಂಪರ್ಕ ರಸ್ತೆಯಲ್ಲಿ ಉಂಟಾದ ಹೊಂಡಗಳಿಗೆ ಬುಧವಾರ ಡಾಮರು ತೇಪೆ ಹಾಕುವ ಕಾಮಗಾರಿಗೆ ಸಾರ್ವಜನಿಕರು ತಡೆಯೊಡ್ಡಿ, ಗುತ್ತಿಗೆದಾರ, ಸಂಬಂಧಪಟ್ಟ ಇಂಜಿನಿಯರ್ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಸುವಂತೆ ಆಗ್ರಹಿಸಿದ ಘಟನೆ ಬುಧವಾರ ನಡೆದಿದೆ.
ಕಡಬ–ಪಂಜ ರಸ್ತೆಯ ಕಡಬದಿಂದ ಕೋಡಿಂಬಾಳ ತನಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಲ್ಲಲ್ಲಿ ಬಹದಾಕಾರದ ಹೊಂಡ ನಿರ್ಮಾಣವಾಗಿದೆ. ದಿನಂಪ್ರತಿ ಹಲವಾರು ಸರ್ಕಾರಿ ಬಸ್‌ಗಳು ಸೇರಿದಂತೆ ನೂರಾರು ವಾಹನ ಓಡಾಟ ಇರುವ ಈ ರಸ್ತೆಯನ್ನು ಪೂರ್ತಿಯಾಗಿ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಸಾರ್ವಜನಿಕರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರು. ಆದರೆ ಅನುದಾನದ ಕೊರತೆ ಇರುವುದರಿಂದ ಸದ್ಯಕ್ಕೆ ರಸ್ತೆಯ ಹೊಂಡ ಮುಚ್ಚಿ ಡಾಂಬರು ತೇಪೆ ಹಾಕುವ ಕಾರ್ಯವನ್ನು ಲೊಕೋಪಯೋಗಿ ಇಲಾಖೆಯ ಮೂಲಕ ಬುಧವಾರ ಬೆಳಗ್ಗೆ ಆರಂಭಿಸಲಾಗಿತ್ತು.
ಕೋಡಿಂಬಾಳದ ಕಲ್ಲಂತಡ್ಕದ ಬಳಿ ಕಾಮಗಾರಿ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಆಟೋ ಚಾಲಕ ಮಾಲೀಕ ಸಂಘದವರು, ಸ್ಥಳೀಯ ಪ್ರಮುಖರು ಹಾಗೂ ಸಾರ್ವಜನಿಕರು ತೇಪೆ ಕಾಮಗಾರಿ ನಡೆಸುವುದು ಬೇಡ. ಕಳೆದ ವರ್ಷ ನಡೆಸಿದ ತೇಪೆ ಕಾಮಗಾರಿ ಕಳಪೆಯಾಗಿದ್ದುದರಿಂದ ಕೆಲವೇ ದಿನಗಳಲ್ಲಿ ಡಾಂಬರು ಎದ್ದುಹೋಗಿ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ಬಾರಿಯೂ ಮತ್ತೆ ಅದೇ ರೀತಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ.ಮಾಡುವುದಿದ್ದರೆ ಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆಸಬೇಕು. ಗುತ್ತಿಗೆದಾರ ಹಾಗೂ ಇಂಜಿನಿಯರ್ ಸ್ಥಳದಲ್ಲಿದ್ದು, ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿ ಕಾಮಗಾರಿ ನಡೆಸದಂತೆ ತಡೆಯೊಡ್ಡಿದ ಪರಿಣಾಮವಾಗಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ತೆರಳಿದ ಘಟನೆ ನಡೆಯಿತು.
ಒಂದು ಗಂಟೆ ಹೆಚ್ಚು ಕೆಲಸ : ಎಸ್.ಎಂ ಕೃಷ್ಣಗೆ ಸೇವೆಯ ಮೂಲಕ ಗೌರವಾರ್ಪಣೆ