ಮೂಲ್ಕಿ: ಕಾರ್ನಾಡು ಪೇಟೆಯಿಂದ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕಿಸುವ ರಸ್ತೆ ಹೊಂಡಗಳಿಂದ ತುಂಬಿದ್ದು, ಸಂಚಾರ ದುಸ್ತರವಾಗಿ ಪರಿಣಮಿಸಿದೆ. ತಿಂಗಳ ಹಿಂದೆ ಮಳೆಗಾಲದ ಮೊದಲು ಹೊಂಡ ಮುಚ್ಚುವಂತೆ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆದರೆ ಇದೀಗ ಮಳೆಗಾಲದಲ್ಲಿ ಜಲ್ಲಿ ಹುಡಿ ಮಿಶ್ರಣದ ಮೂಲಕ ಲೋಕೋಪಯೋಗಿ ಇಲಾಖೆ ಎರಡನೇ ಬಾರಿ ಅಪಾಯಕಾರಿ ಹೊಂಡಕ್ಕೆ ತೇಪೆ ಕಾರ್ಯ ನಡೆಸಿದೆ.
ಮಳೆಗಾಲದಲ್ಲಿ ತೇಪೆ ಕಾರ್ಯ ಮಾಡಿರುವುದರಿಂದ ಮಳೆ ನೀರಿಗೆ ಜಲ್ಲಿ ಹುಡಿ ಕೊಚ್ಚಿ ಹೋಗುತ್ತಿದೆ. ಕೆಲ ದಿನಗಳ ಹಿಂದೆ ನಡೆದ ಇದೇ ರೀತಿಯ ತೇಪೆ ಕಾಮಗಾರಿ ಮಳೆ ನೀರು ಪಾಲಾಗಿತ್ತು. ಬಿಸಿಲು ಇರುವಾಗ ತೇಪೆ ಕಾರ್ಯ ಮಾಡದ ಇಲಾಖೆ ಅನವಶ್ಯವಾಗಿ ಮಳೆಗಾಲದಲ್ಲಿ ರಸ್ತೆಗೆ ತೇಪೆ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ par ವ್ಯಕ್ತಪಡಿಸಿದ್ದಾರೆ.