

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಅತಿಯಾದ ವೇಗ , ಸಂಚಾರ ನಿಯಮ ಉಲ್ಲಂಘನೆ , ಮದ್ಯಪಾನ ಸೇವಿಸಿ ವಾಹನ ಚಾಲನೆ , ಸಂಚಾರಕ್ಕೆ ಅರ್ಹರಲ್ಲರಲ್ಲದವರ ಚಾಲನೆ , ಹೆಚ್ಚುವರಿ ಭಾರ , ಅಪಾಯಕಾರಿ ತಿರುವುಗಳು , ವಾಹನ ಚಾಲಕರ ನಿರ್ಲಕ್ಷ್ಯತನ ,ಸಮರ್ಪಕವಾದ ಸಂಚಾರಿ ಮಾಹಿತಿ ಇಲ್ಲದಿರುವುದರಿಂದ ಜಿ¯್ಲÉಯಲ್ಲಿ ರಸ್ತೆಗಳ ಅಪಘಾತಗಳು ನಿರಂತರವಾಗಿ ಹೆಚ್ಚುತ್ತಿವೆ.
ಜಿ¯್ಲÉಯಲ್ಲಿ ಕಳೆದ ಜನವರಿ ೧ ರಿಂದ ಇಲ್ಲಿಯವರೆಗಿನ ಪತ್ಯೇಕ ೧೪೮ ರಸ್ತೆ ಅಪಘಾತದಲ್ಲಿ ಒಟ್ಟು ೬೫ ಜನರು ಮೃತಪಟ್ಟಿದ್ದಾರೆ. ಕಳೆದ ರಾತ್ರಿ ನಗರದ ಸ್ಟೇಷನï ರಸ್ತೆಯ ಮಾರ್ಗದಲ್ಲಿ ಬೃಹತï ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಬರ್ಬರವಾಗಿ ಮೃತಪಟ್ಟಿದ್ದು , ಆ ದೃಶ್ಯಗಳು ಸಾಮಾಜಿಕ ಜÁಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆ ಜಿ¯್ಲÉಯಲ್ಲಿ ಅಪಘಾತಗಳ ನಡೆಯುತ್ತಿರುವ ಕುರಿತಂತೆ ಜೋರಾದ ಚರ್ಚೆಗಳು ಪ್ರಾರಂಭವಾಗಿವೆ.
ಮೂರು ತಿಂಗಳಲ್ಲಿ ೬೫ ಜನ ಸಾವು
ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ರಸ್ತೆ ಅಪಘಾತಗಳು ಹೆಚ್ಚಳವಾಗುತ್ತಿದ್ದು, ಜಿಲ್ಲಾ ಪೊಲೀಸ್ ಇಲಾಖೆಯು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ಮಾಡಿದರು ಸಹ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿ. ಜನವರಿ ೦೧ ರಿಂದ ಮಾ.೧೮ ರವರೆಗೆ ಒಟ್ಟು ೧೪೮ ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ ೫೯ ಪ್ರಕಣರಗಳು ಗಂಭೀರ ಸ್ವರೂಪದ ಅಪಘಾತಗಳು ಸಂಭವಿಸಿದರೆ, ೮೯ ಪ್ರಕಣರಗಳು ಸಾಮಾನ್ಯ ರೀತಿಯ ಅಪಘಾತಗಳಾಗಿವೆ.
ಈ ಪೈಕಿ ಇದರಲ್ಲಿ ೬೫ ಜನರು ಅಪಘಾತದಲ್ಲಿ ಮೃತಪಟ್ಟರೆ,೧೧೭ ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯ ಪಾಲಾಗಿದ್ದು , ೯೬ ಜನರು ಸಾಮಾನ್ಯ ರೀತಿಯಲ್ಲಿ ಗಾಯಗಳಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿz್ದÁರೆ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಬಸ್‌ಗಳ ಹಲವರ ಪಾಲಿಗೆ ಯವಧರ್ಮರಾಜನಾಗಿ ಬಂದಿರುವುದು ದುರಂತವೇ ಸರಿ.
ಈ ಎ¯್ಲÁ ಅಂಕಿ ಅಂಶಗಳು ಗಾಭರಿ ಹುಟ್ಟಿಸುವಂತಿದ್ದರು ಸುಪ್ರೀಂಕೋರ್ಟಿನ ನಿರ್ದೇಶನದಂತೆ ಅಪಘಾತದಲ್ಲಿ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ಮಾಡಲಾಗುತ್ತಿದೆ. ಜಿ¯್ಲÁ ರಸ್ತೆ ಸುರಕ್ಷತಾ ಸಮಿತಿ ರಚನೆ ಮಾಡಿ ಎ¯್ಲÁ ಅಽಕಾರಿಗಳ ಒಳಗೊಂಡ ಸಭೆನಡೆಸಿ ಅಪಘಾತಕ್ಕೆ ಕಡಿವಾಣ ಹಾಕಬೇಕಿದೆ.
ಹೆಲ್ಮೆಟï ಕಡ್ಡಾಯ
ನಗರದಲ್ಲಿ ಕಳೆದ ೨೦೨೪ರ ನವೆಂಬರ್ ತಿಂಗಳಿನಿAದ ಹೆಲ್ಮೆಟï ಧರಿಸುವುದು ಕಡ್ಡಾಯ ಮಾಡಲಾಗಿದೆ. ಆದರೂ ಸಹ ಹಲವರು ಬಿಸಿಲಿನ ಧಗೆ ,ಕೂದಲು ಉದುರುವ ಕಾರಣ , ಬೆವರು ಅತಿಯಾಗಿ ಬರುವುದು ಎಂಬ ಕಾರಣಕ್ಕೆ ನೆಪ್ದಿಂದ ಹೆಲ್ಮೆಟï ಧರಿಸದೇ ಇರುವುದು ಕೂಡ ನಗರದಲ್ಲಿ ಹಲವರು ಪ್ರಾಣವನ್ನು ಕಳೆದುಕೊಂಡಿರುವ ಘಟನೆ ಜರುಗಿದೆ.
ಜಿ¯್ಲÉಯ ರಸ್ತೆಯಲ್ಲಿರುವ ಗುಂಡಿಗಳಿಗಿಲ್ಲ ಮುಕ್ತಿ ಭಾಗ್ಯ
ನಗರದಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದರು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಕನಿಷ್ಠ ಮಟ್ಟದಲ್ಲಿ ಸರಿ ಪಡಿಸದಿರುವುದು. ಹಾಗೂ ಜಿ¯್ಲÉಯ ಹಲವು ಗ್ರಾಮಾಂತರದ ಮಟ್ಟಲ್ಲಿರುವ ರಸ್ತೆಗಳಂತೂ ಯಾವಾಗ ಸರಿ ಕಾಣವುದು ಆ ದೇವರ ಬ¯್ಲÁ ಈ ರಸ್ತೆಯಲ್ಲಿ ಅತಿಯಾದ ವೇಗದಿಂದ ಚಲಿಸುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ.
ಮನಸೋ ಇಚ್ಚೆ ರೋಡ ಬ್ರೇಕ್
ಹೇಳಿ ಕೇಳಿ ಹದೆಗೆಟ್ಟ ರಸ್ತೆಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಕನಿಷ್ಠ ಮಟ್ಟದ e್ಞÁನವಿಲದೇ ಅವೈe್ಞÁನಿಕವಾಗಿ ಶಕ್ತಿನಗರದಿಂದ ರಾಯಚೂರು ರಸ್ತೆ , ಗದ್ವಾಲï ರಸ್ತೆ , ಮಂತ್ರಾಲಯ ರಸ್ತೆ , ಲಿಂಗಸೂಗೂರು ರಸ್ತೆ ಸೇರಿದಂತೆ ವಿವಿದೆಡೆ ಮನಸೋ ಇಚ್ಚೆ ಅವೈಜ್ಞಾನಿಕವಾಗಿ ರೋಡ್ ಬ್ರೇಕ್ ಅಳವಡಿಸಿರುವು ಅಲ್ಲದೇ ನಗರಗಳಲ್ಲಿ ಬಸವೇಶ್ವರ ಹಾಗೂ ಗಂಜï ವೃತ್ತದ ಹೊರತು ಪಡಿಸಿ ಎಲ್ಲಿಯೂ ಕೂಡ ಸಿಗ್ನಲï ಇರದೇ ಇರುವುದು ಕೂಡಾ ಕಾರಣವಾಗಿದೆ.
ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ನಡೆಯದಂತೆ ಪ್ರತಿ ಠಾಣೆಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಅತಿ ವೇಗವಾಗಿ ವಾಹನ ಚಾಲನೆ ಮಾಡಿ ಅಪಘಾತದಲ್ಲಿ ಮೃತಪಟ್ಟರೆ ಮುಂದೆ ಅವರ ಕುಟುಂಬ ಯಾವ ರೀತಿಯಲ್ಲಿ ತೊಂದರೆ ಅನುಭವಿಸುತ್ತದೆ ಎನ್ನುವ ಕುರಿತು ಇತ್ತಿಚ್ಚಿಗೆ ಚಿತ್ರ ನಟ ಡಾಲಿ ಧÀನಂಜಯ ಅವರ ಜತೆಗೆ ೧೭ ನಿಮಿಷದ ಕಿರು ಚಿತ್ರ ಮಾಡಿಸಿ ಶಾಲಾ,ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ.
ಎಂ.ಪುಟ್ಟಮಾದಯ್ಯ ಎಸ್ಪಿ ರಾಯಚೂರು