ನ. 22ಕ್ಕೆ ಮರ್ಯಾದೆ ಪ್ರಶ್ನೆ ; ನಾಗರಾಜ್​ ಸೋಮಯಾಜಿ ನಿರ್ದೇಶನದ ಫ್ಯಾಮಿಲಿ ಎಂಟರ್​ಟೇನರ್​

zxcvzxc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
"ದಿ ಬೆಸ್ಟ್​ ಆ್ಯಕ್ಟರ್​' ಎಂಬ ಮೈಕ್ರೋ ಮೂವಿ ನಿರ್ದೇಶಿಸಿದ್ದ ನಾಗರಾಜ್​ ಸೋಮಯಾಜಿ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿರುವ ಸಿನಿಮಾ "ಮರ್ಯಾದೆ ಪ್ರಶ್ನೆ'. ಕೆಲ ತಿಂಗಳ ಹಿಂದೆ ನೂರಕ್ಕೂ ಹೆಚ್ಚು ತಾರೆಯರು ಜಾಲತಾಣದಲ್ಲಿ ಚಿತ್ರದ ಟೈಟಲ್​ ರಿಲೀಸ್​ ಮಾಡಿದ್ದರು. ಬಳಿಕ ರ್ಯಾಪರ್​ ಆಲ್​ಓಕೆ "ಮರ್ಯಾದೆ ಪ್ರಶ್ನೆ' ಎಂಬ ಆಲ್ಬಂ ಸಾಂಗ್​ ಒಂದನ್ನು ಜುಲೈನಲ್ಲಿ ಬಿಡುಗಡೆ ಮಾಡಿದ್ದರು. ಇದೀಗ ಚಿತ್ರತಂಡ ಇದೇ ನ. 22ರಂದು ಸಿನಿಮಾ ರಿಲೀಸ್​ ಮಾಡುವುದಾಗಿ ಘೋಷಿಸಿದೆ.

ಇದೊಂದು ಫ್ಯಾಮಿಲಿ ಎಂಟರ್​ಟೇನರ್​ ಚಿತ್ರವಾಗಿದ್ದು, ಆರ್​ಜೆ ಪ್ರದಿಪ ಕಥೆ ಬರೆದು ಸಕ್ಕತ್​ ಸ್ಟುಡಿಯೋ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ನಾಗರಾಜ್​, "ನಾನು ಮತ್ತು ಪ್ರದಿಪ್​ ಆತ್ಮೀಯ ಗೆಳೆಯರು. ಪ್ರೇಕ್ಷಕರಿಗೆ ಇಷ್ಟವಾಗುವ ನೈಜತೆಗೆ ಹತ್ತಿರವಿರುವ ಸಿನಿಮಾ ಮಾಡಿದ್ದೇವೆ. ಅದ್ಭುತ ತಾರಾಬಳಗ ಮತ್ತು ತಾಂತ್ರಿಕ ತಂಡ ಈ ಚಿತ್ರದಲ್ಲಿ ಕೆಲಸ ಮಾಡಿದೆ' ಎಂದರು.

ನ. 22ರಂದು ಕರ್ನಾಟಕ ಮಾತ್ರವಲ್ಲದೇ ಹೈದರಾಬಾದ್​, ಚೆನ್ನೈ ಸೇರಿ ಹೊರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲೂ ಸಿನಿಮಾ ರಿಲೀಸ್​ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಚಿತ್ರದಲ್ಲಿ ರಾಕೇಶ್​ ಅಡಿಗ, ಸುನೀಲ್​ ರಾವ್​, ಶೈನ್​ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್​, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವತ್​ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಸಂದೀಪ್​ ವೆಲ್ಲುರಿ ಛಾಯಾಗ್ರಹಣ ಹಾಗೂ ಅರ್ಜುನ್​ ರಾಮು ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net