More

  ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಆಘಾತ: ಹೊರಬಿದ್ದ ಆಲ್ರೌಂಡರ್

  ನವದೆಹಲಿ: ಗಾಯದ ಸಮಸ್ಯೆಗೆ ತುತ್ತಾಗಿರುವ ಭಾರತದ ಉದಯೋನ್ಮೂಖ ವೇಗಿ ಕಾಶ್ವಿ ಗೌತಮ್ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನ (ಡಬ್ಲುೃಪಿಎಲ್) ಎರಡನೇ ಆವೃತ್ತಿಯ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ2 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ತಂಡ ಸೇರಿದ್ದ ಕಾಶ್ವಿ, ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತ ಪಡೆದ ಆನ್‌ಕ್ಯಾಪ್ಡ್ ಕ್ರಿಕೆಟರ್ ಎನಿಸಿದ್ದರು. ಕಾಶ್ವಿ ಬದಲಿಗೆ ಮುಂಬೈನ ಸಯಾಲಿ ಸಯಾಲಿ ಸತ್ಗರೆ ಮೂಲ ಬೆಲೆ 10 ಲಕ್ಷ ರೂಪಾಯಿಗೆ ಗುಜರಾತ್ ತಂಡ ಸೇರ್ಪಡೆಯಾಗಿದ್ದಾರೆ.

  ಆರ್‌ಸಿಬಿ ಮಹಿಳಾ ತಂಡದ ಆಲ್ರೌಂಡರ್ ಕನಿಕಾ ಅಹುಜಾ ಸಹ 2024ರ ಆವೃತ್ತಿಯಿಂದ ಹೊರಬಿದಿದ್ದು, ಟೂರ್ನಿಗೂ ಮುನ್ನ ಸ್ಮತಿ ಮಂದನಾ ಪಡೆ ಆಘಾತ ಎದುರಿಸಿದೆ. ಕನಿಕಾ ಬದಲಿಗೆ ಮಹಾರಾಷ್ಟ್ರದ ಎಡಗೈ ವೇಗಿ ಶ್ರದ್ಧಾ ಪೊಖ್ರಾಕರ್ ಮೂಲಬೆಲೆ 10 ಲಕ್ಷ ರೂಪಾಯಿಗಳಿಗೆ ಆರ್‌ಸಿನಿ ಬಳಗ ಸೇರಿದ್ದಾರೆ. ಚೊಚ್ಚಲ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಆರ್‌ಸಿಬಿ ತಂಡಕ್ಕೆ ಈ ಬಾರಿ ತವರು ಅಭಿಮಾನಿಗಳ ಬೆಂಬಲ ದೊರೆಯಲಿದ್ದು, 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ೆ.24 ರಂದು ಯುಪಿ ವಾರಿಯರ್ಸ್‌ ತಂಡವನ್ನು ಚಿನ್ನಸ್ವಾಮಿ ಅಂಗಣದಲ್ಲಿ ಎದುರಿಸಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts