ಎಲ್​ಎಸ್​ಜಿ ತಂಡದ ನಾಯಕನಾಗಿ Rishabh Pant ನೇಮಕ!

Rishabh Pant
Published on

ಲಖನೌ: 18ನೇ ಆವೃತ್ತಿಯ ಐಪಿಎಲ್​ ಆರಂಭವಾಗುವುದಕ್ಕೆ ಎರಡು ತಿಂಗಳು ಬಾಕಿ ಉಳಿದಿದ್ದು, ತಂಡಗಳು ಈಗಾಗಲೇ ತಯಾರಿಯನ್ನು ಆರಂಭಿಸಿವೆ. 2024ರ ನವೆಂಬರ್ ತಿಂಗಳಲ್ಲಿ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ರಿಷಭ್​ ಪಂತ್​ (Rishabh Pant), ಡೇವಿಡ್​ ಮಿಲ್ಲರ್​ನಂತಹ ಸ್ಫೋಟಕ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ಉದ, ಈ ಬಾರಿ ಕಪ್​ ಗೆಲ್ಲುವ ವಿಶ್ವಾಸದಲ್ಲಿದೆ.

ಇನ್ನೂ ಈ ಹಿಂದೆ ಲಖನೌ ಸೂಪರ್​ಜೈಂಟ್ಸ್​ ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್​ (KL Rahul) ಈ ಬಾರಿಯ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಸೇರಿಕೊಂಡಿದ್ದು, ರಿಷಭ್​ ಪಂತ್ (Rishabh Pant) ದುಬಾರಿ ಮೊತ್ತಕ್ಕೆ​ ಲಖನೌ ಸೂಪರ್​ಜೈಂಟ್ಸ್​ ಪಾಲಾಗಿದ್ದಾರೆ. ಎಲ್​ಎಸ್​ಜಿ ತಂಡದ ​ ನಾಯಕ ಯಾರಾಗಲಿದ್ದಾರೆ ಎಂಬ ವಿಚಾರಕ್ಕೆ ತೆರೆಬಿದ್ದಿದ್ದು, ರಿಷಭ್ ಪಂತ್​ ನಾಯಕತ್ವ ವಹಿಸಿಕೊಳ್ಳುವುದು ಖಚಿತವಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

rishabh pant

2024ರ ನವೆಂಬರ್​ 24-25ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ರಿಷಭ್​ ಪಂತ್​ ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆಯನ್ನ ಬರೆದಿದ್ದರು. ಈ ಬಾರಿ ಲಖನೌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸ ಕ್ರೀಡಾಭಿಮಾನಿಗಳಲ್ಲಿ ಮೂಡಿದ್ದು, ಯಶ ಕಾಣುತ್ತಾರಾ ಎಂದು ಕಾದು ನೋಡಬೇಕಿದೆ.

2016ರಿಂದ ಐಪಿಎಲ್​ ಆಡುತ್ತಿರುವ ರಿಷಭ್​ ಪಂತ್​ (Rishabh Pant) ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಭಾಗವಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ ಪರ 110 ಪಂದ್ಯಗಳಲ್ಲಿ 35.31 ಸರಾಸರಿಯಲ್ಲಿ ಒಂದು ಶತಕ, 18 ಅರ್ಧಶತಕ ಒಳಗೊಂಡಂತೆ 3,284 ರನ್ ಗಳಿಸಿದ್ದಾರೆ. 2021ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗ ನೇಮಕಗೊಂಡ ರಿಷಭ್​ ಪಂತ್​ ತಂಡವನ್ನು ಪ್ಲೇಆಫ್​ಗೇರಿಸುವಲ್ಲಿ ಯಶಸ್ವಿಯಾಗಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net