ಗಾಯದಿಂದ ಬಳಲುತ್ತಿದ್ದರೂ ಅಖಾಡಕ್ಕೆ ಪಂತ್​! ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾ 'ಬೆನ್ನೆಲುಬು' | Rishabh Pant

ವಿಜಯವಾಣಿ (60)
Published on

Rishabh Pant: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಮ್ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ರಿಷಭ್ ಪಂತ್​, ಪ್ರಸ್ತುತ ಮ್ಯಾಂಚೆಸ್ಟರ್​ ಅಂಗಳದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದಾರೆ. ಈ ಮೊದಲು ಇಂಗ್ಲೆಂಡ್​ ಎದುರು ಪಂತ್​ ಆಡುವುದು ಬಹುತೇಕ ಡೌಟ್​ ಎಂದೇ ಹೇಳಲಾಗಿತ್ತು. ಆದರೆ, ಲೆಕ್ಕಾಚಾರಗಳು ಇದೀಗ ಬದಲಾಗಿವೆ.

ನಾಲ್ಕನೇ ಟೆಸ್ಟ್​ನ ಎರಡನೇ ದಿನದಂದು ಬ್ಯಾಟಿಂಗ್ ಮಾಡುತ್ತಿರುವ ಭಾರತ ಸದ್ಯ ಸಾಧಾರಣ ಮೊತ್ತದತ್ತ ಸಾಗಿದೆ. ಎರಡನೇ ದಿನದ ಊಟದ ವಿರಾಮದ​ ವೇಳೆಗೆ ಟೀಮ್ ಇಂಡಿಯಾ 6 ವಿಕೆಟ್‌ ನಷ್ಟಕ್ಕೆ 321 ರನ್ ಗಳಿಸಿತ್ತು. ಇದೇ ಸಮಯದಲ್ಲಿ ತಂಡದ ಪರ ವಾಷಿಂಗ್ಟನ್ ಸುಂದರ್ (20*) ಮತ್ತು ರಿಷಭ್ ಪಂತ್ (39*​) ರನ್​ ಬಾರಿಸಿ, ಕ್ರೀಸ್​ಗೆ ಅಂಟಿ ನಿಂತಿದ್ದಾರೆ. ನಾಲ್ಕನೇ ಟೆಸ್ಟ್​ನಲ್ಲಿಯೂ ಉತ್ತಮ ಬ್ಯಾಟಿಂಗ್ ನಡೆಸಿರುವ ರಿಷಭ್​, ಆಕರ್ಷಕ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ತಾವು ಭಾರತ ತಂಡದ ಬೆನ್ನೆಲುಬು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದ್ದಾರೆ.

2ನೇ ದಿನದಾಟವನ್ನು 264/4 ಸ್ಕೋರ್‌ನೊಂದಿಗೆ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್ ನೀಡುವ ಮೂಲಕ ರವೀಂದ್ರ ಜಡೇಜಾ ತಮ್ಮ ವೈಯಕ್ತಿಕ ಸ್ಕೋರ್‌ಗೆ ಕೇವಲ ಒಂದು ರನ್ ಸೇರಿಸಿದರೆ ಹೊರತು ಕಮಾಲ್ ಮಾಡಲು ಸಾಧ್ಯವಿಲ್ಲ.

ಪ್ರಸ್ತುತ ಪಂದ್ಯದ ವಿವರ

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​, ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಳ್ಳುವ ಮೂಲಕ ಗಿಲ್ ಪಡೆಗೆ ಬ್ಯಾಟಿಂಗ್ ಆಹ್ವಾನಿಸಿದೆ. ಭಾರತದ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 58, ಕೆ.ಎಲ್. ರಾಹುಲ್ 46, ಸಾಯಿ ಸುದರ್ಶನ್ 61, ಶುಭಮನ್ ಗಿಲ್ 12, ರವೀಂದ್ರ ಜಡೇಜಾ 20 ಮತ್ತು ಶಾರ್ದೂಲ್ ಠಾಕೂರ್ 41 ರನ್ ಗಳಿಸಿದ್ದಾರೆ. ಇನ್ನು ಇಂಗ್ಲೆಂಡ್​ ಪರ ಬೆನ್​ ಸ್ಟೋಕ್ಸ್ 3 ವಿಕೆಟ್ ಪಡೆದರೆ, ಕ್ರಿಸ್​ ವೋಕ್ಸ್, ಆರ್ಚರ್ ಮತ್ತು ಡಾಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಪ್ರಸ್ತುತ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net