India V/S South Africa| ತಂಡದಲ್ಲಿ ಪಂತ್, ಜುರೇಲ್ ಹಾಗೂ ಕೆ.ಎಲ್​.ರಾಹುಲ್ ಮೂವರು ವಿಕೇಟ್ ಕೀಪರ್​; ಟೀಂ 11ರಲ್ಲಿ ಯಾರಾಡಲಿದ್ದಾರೆ? ಕೋಚ್ ಹೇಳಿದ್ದೇನು?

ವಿಜಯವಾಣಿ - 2025-11-12T184844.681
Published on

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ(India V/S South Africa) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ನ. 14ರಿಂದ ಮೊದಲ ಟೆಸ್ಟ್ ಪಂದ್ಯ ಮತ್ತು ನ. 22ರಂದು ಎರಡನೇ ಪಂದ್ಯ ನಡೆಯಲಿದೆ. ಭಾರತೀಯ ತಂಡದ 15 ಆಟಗಾರರಲ್ಲಿ ವೈಸ್​ ಕ್ಯಾಪ್ಟನ್ ರಿಷಭ್ ಪಂತ್, ಧ್ರುವ್ ಜುರೇಲ್ ಹಾಗೂ ಕೆ.ಎಲ್.ರಾಹುಲ್ ಮೂವರು ವಿಕೇಟ್ ಕೀಪರ್​ಗಳು ಸ್ಥಾನ ಪಡೆದಿದ್ದಾರೆ. ಆದರೆ ಟೀಂ 11ರಲ್ಲಿ ಯಾರು ಆಡಲಿದ್ದಾರೆ ಎನ್ನುವುದು ತೀವ್ರ ಕೂತುಹಲ ಮೂಡಿದೆ.

ಮೊದಲ ಟೆಸ್ಟ್ ಪಂದ್ಯವು ನ. 14ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾರತದ ಕ್ಯಾಪ್ಟನ್ ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ತಂಡವು ಆಟವಾಡಲಿದ್ದು, ಈ ಮೂರು ವಿಕೆಟ್ ಕೀಪರ್‌ಗಳ ಬಲವು ತಂಡದ ಬ್ಯಾಟಿಂಗ್ ಆಯ್ಕೆಗಳನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇಂಗ್ಲೆಂಡ್​ನಲ್ಲಿ ಗಾಯಗೊಂಡು ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ರಿಷಭ್ ಪಂತ್ ತಂಡಕ್ಕೆ ಮರಳಿದ್ದು, ಧ್ರುವ್ ಜುರೇಲ್ ಸ್ಥಾನದ ಪ್ರಶ್ನೆಗಳು ಎದ್ದಿದ್ದವು.

ಬುಧವಾರ ಈ ಎಲ್ಲಾ ಅನುಮಾನಗಳ ಬಗ್ಗೆ ಸ್ಪಷ್ಟೀಕರಣ ನೀಡಿರುವ ಭಾರತೀಯ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್, ರಿಷಭ್ ಪಂತ್ ಮತ್ತು ಧ್ರುವ್ ಜುರೇಲ್ ಇಬ್ಬರು ಟೀಂ 11ರಲ್ಲಿ ಇರಬಹುದು. ಧ್ರುವ್ ಜುರೇಲ್ ಅವರ ಉತ್ತಮ ಫಾರ್ಮ್‌ನನ್ನು ಗಮನಿಸಿ, ಅವರನ್ನು ಪ್ರಮುಖ ಬ್ಯಾಟರ್ ಆಗಿ ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ನಿತೀಶ್ ಕುಮಾರ್ ರೆಡ್ಡಿ ಆಟದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ ಜೂರೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಎರಡು ಶತಕಗಳನ್ನು ಬಾರಿಸಿದರು. ಭಾರತ ಎ ಪರ ಅವರ ಕೊನೆಯ ಕೆಲವು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಅಂತಹ ಆಟಗಾರರನ್ನು ತಂಡದಿಂದ ಹೊರಗಿಡುವುದು ಕಷ್ಟ ಎಂದಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತದ ಸಂಭಾವ್ಯ ಟೀ 11: ಶುಭಮನ್ ಗಿಲ್ (ಸಿ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್ (ಡಬ್ಲ್ಯುಕೆ) (ವಿಸಿ), ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಆಡಬಹುದು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net