More

    ಕೊಚ್ಚಿನ್​ನಿಂದ ಮುಂಬೈವರೆಗೆ; ರಿಷಭ್​ ಶೆಟ್ಟಿ ಹೊಸ ಪ್ರಯಾಣ

    ಮುಂಬೈ: ‘ಕಾಂತಾರ’ ಚಿತ್ರದ ಪ್ರಮೋಷನ್​ಗಾಗಿ ರಿಷಭ್​ ಶೆಟ್ಟಿ ಕೆಲವು ದಿನಗಳ ಹಿಂದೆ ಬೇರೆಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟು, ಈಗ ಮತ್ತೊಮ್ಮೆ ಅವರು ಕೊಚ್ಚಿನ್​ನಿಂದ ಮುಂಬೈವರೆಗೂ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಅವರು ಹೋಗಿರುವುದು ಧನ್ಯವಾದ ಸಮರ್ಪಿಸಲಿಕ್ಕೆ.

    ಇದನ್ನೂ ಓದಿ: ‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್​ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್​

    ರಿಷಭ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ಸೆ. 30ರಂದು ಕನ್ನಡದಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಪಡೆದಿತ್ತು. ಆ ನಂತರ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್​ ಆಗುವ ಮೂಲಕ ಪ್ಯಾನ್ ಇಂಡಿಯಾಗೆ ಡಬ್​ ಆಗಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ರಿಷಭ್​ ಶೆಟ್ಟಿ, ಸಪ್ತಮಿ ಗೌಡ, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಮುಂಬೈ, ಹೈದರಾಬಾದ್ ಸೇರಿದಂತೆ ಹಲವು ನಗರಗಳಿಗೆ ಭೇಟಿ ಕೊಟ್ಟು ಚಿತ್ರದ ಪ್ರಚಾರ ಮಾಡಿದ್ದಾರೆ.

    ಈಗ ಚಿತ್ರ ಗೆದ್ದ ಖುಷಿಯಲ್ಲಿ ರಿಷಭ್​ ಮತ್ತೊಮ್ಮೆ ಚಾರ್ಟರ್ಡ್​ ಫ್ಲೈಟ್​ ಹತ್ತಿದ್ದಾರೆ. ಈ ಬಾರಿ ಅವರು ಹೋಗಿದ್ದು ಚಿತ್ರ ಗೆಲ್ಲಿಸಿದ ಜನರಿಗೆ ಧನ್ಯವಾದ ಹೇಳಲಿಕ್ಕೆ. ಬೆಂಗಳೂರಿನಿಂದ ಕೊಚ್ಚಿನ್​ಗೆ ಹೊರಟು, ಅಲ್ಲಿಂದ ಚೆನ್ನೈ, ತಿರುಪತಿ, ವಿಶಾಖಪಟ್ನಂ ಮತ್ತು ಮುಂಬೈಗೆ ಹೋಗಿದ್ದಾರೆ. ಭೇಟಿ ನೀಡಿದ ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾತನಾಡುವುದರ ಜತೆಗೆ, ಚಿತ್ರ ಗೆಲ್ಲಿಸಿದ ಜನರಿಗೆ ಅಭಿನಂದನೆ ತಿಳಿಸಿದ್ದಾರೆ.

    ಇದನ್ನೂ ಓದಿ: ವರಾಹ ರೂಪಂ’ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್​ ಆದೇಶ

    ಬರೀ ಪತ್ರಿಕಾಗೋಷ್ಠಿಗಳನ್ನು ನಡೆಸುವುದರಷ್ಟೇ ಅಲ್ಲ. ಕೆಲವು ದೊಡ್ಡ ದೇವಸ್ಥಾನಗಳಿಗೂ ಹೋಗಿ ದೇವರ ಆಶೀರ್ವಾದ ಪಡೆದಿದ್ದಾರೆ. ಸಿಂಹಾಚಲ ದೇವಸ್ಥಾನ, ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೂ ರಿಷಭ್​ ಭೇಟಿಕೊಟ್ಟು ದೇವರ ದರ್ಶನ ಮಾಡಿದ್ದಾರೆ.

    ಜಯಾ ಅವರನ್ನು ಮದುವೆಯಾಗುವುದಕ್ಕೆ ಒಂದು ಕಂಡೀಷನ್​ ಹಾಕಿದ್ದರಂತೆ ಅಮಿತಾಭ್​ … ಏನು ಗೊತ್ತಾ ಅದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts