ನವದೆಹಲಿ: ಸದ್ಯ ಕ್ರೀಡಾಭಿಮಾನಿಗಳ ಕಣ್ಣುಗಳು ಮುಂಬರುವ ಐಪಿಎಲ್-2025 ಆವೃತ್ತಿಯ ಮೇಲೆ ನೆಟ್ಟಿದೆ. ಬಿಸಿಸಿಐ ಈ ಸೀಸನ್ಗಾಗಿ ಕೆಲವು ನಿಯಮಗಳಿಗೆ ತಿದ್ದುಪಡಿ ತರುತ್ತಿದೆ ಎಂಬ ಮಾಹಿತಿ ಇದೆ. ಅದಕ್ಕಾಗಿ ಎಲ್ಲ ಫ್ರಾಂಚೈಸಿಗಳಿಂದ ಸಲಹೆಗಳನ್ನು ಕೇಳಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಭೆಯಲ್ಲಿ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಕೆಲವು ಬದಲಾವಣೆಗಳನ್ನು ಸಹ ಪ್ರಸ್ತಾಪ ಮಾಡಿವೆ.
ಮೆಗಾ ಹರಾಜಿಗೂ ಮುನ್ನ ಎಲ್ಲ ತಂಡಗಳು ಕೆಲ ಆಟಗಾರರನ್ನು ಬಿಡುಗಡೆ ಮಾಡಲಿವೆ. ಒಂದು ವೇಳೆ ನನ್ನನ್ನು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡ ಉಳಿಸಿಕೊಳ್ಳದಿದ್ದರೆ ಈ ಒಂದು ತಂಡವನ್ನು ಸೇರಿಕೊಳ್ಳಲು ಬಯಸುತ್ತೇನೆ ಎಂದು ಟೀಮ್ ಇಂಡಿಯಾ ಆಟಗಾರ ರಿಂಕು ಸಿಂಗ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ರಿಂಕು ಸಿಂಗ್ ಅವರು ಐಪಿಎಲ್ ಮೂಲಕವೇ ಜನರ ಗಮನ ಸೆಳೆದರು. ಕೊನೆಯ ಓವರ್‌ನಲ್ಲಿ 5 ಎಸೆತಗಳಲ್ಲಿ ಸತತ 5 ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸಿದನ್ನು ಮರೆಯುವಂತಿಲ್ಲ. ಐಪಿಎಲ್ನಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್ ಗಮನ ಸೆಳೆದ ರಿಂಕು, ಟೀಮ್ ಇಂಡಿಯಾವನ್ನು ಪ್ರವೇಶಿಸಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಬಂದ ನಂತರ ಸಿಕ್ಕ ಅವಕಾಶಗಳನ್ನು ರಿಂಕು ಚೆನ್ನಾಗಿ ಬಳಸಿಕೊಂಡರು. ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್ ಗಳಿಸುವ ಮೂಲಕ ತಂಡದಲ್ಲಿ ಅತ್ಯುತ್ತಮ ಫಿನಿಶರ್ ಎಂದು ಗುರುತಿಸಲ್ಪಟ್ಟಿದ್ದಾರೆ.
ಇತ್ತೀಚೆಗಷ್ಟೇ ಕ್ರೀಡಾ ವಾಹಿನಿಯೊಂದರ ಜೊತೆ ಮಾತನಾಡಿದ ರಿಂಕು, ಕುತೂಹಲಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ ನನ್ನನ್ನು ಉಳಿಸಿಕೊಳ್ಳದಿದ್ದರೆ ನಾನು ವಿರಾಟ್ ಕೊಹ್ಲಿ ಅವರ ತಂಡವಾದ ಆರ್‌ಸಿಬಿ ಪರ ಆಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೀಗ ಆರ್‌ಸಿಬಿ ವಲಯದಲ್ಲಿ ಈ ಹೇಳಿಕೆ ಹಾಟ್ ಟಾಪಿಕ್ ಆಗಿದೆ.
Rinku Singh picks RCB as a team he would like to play for if KKR doesn't retain him. (Sports Tak). pic.twitter.com/yhIIDvnKDk
— Mufaddal Vohra (@mufaddal_vohra) August 18, 2024
ಇನ್ನು ಮೆಗಾ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಬಿಸಿಸಿಐ ಮುಂದೆ ಕೆಲ ಪ್ರಸ್ತಾಪಗಳನ್ನು ಮುಂದಿಟ್ಟಿವೆ. ಗರಿಷ್ಠ ಸಂಖ್ಯೆಯ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಕೊಡಿ ಎಂದು ಕೇಳಿವೆ. ಅಲ್ಲದೆ, ಹರಾಜು ಹಣ ಹೆಚ್ಚಳ ಮಾಡುವಂತೆಯೇ ಒತ್ತಾಯಿಸಿದ್ದಾರೆ. ಆದರೆ, ಇದನ್ನು ಬಿಸಿಸಿಐ ಯಾವ ರೀತಿ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ಗಂಭೀರ್ಗೆ ಅದೊಂದನ್ನು ಮಾತ್ರ ಹೇಳಲಾಗದು, ಬೇಡ ಎನ್ನಲು ನಾನ್ಯಾರು? ಜಯ ಷಾ ಅಚ್ಚರಿ ಹೇಳಿಕೆ
ಓ ವಿಧಿಯೇ ನೀನೆಷ್ಟು ಕ್ರೂರಿ… ತಾಯಿಯ ಅಂತಿಮ ಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ ಬಾಲಕಿ!
ಹೌದು ನಾನು ಮದುವೆ ಆಗುತ್ತೇನೆ ಆದರೆ… ಬಾಲಿವುಡ್ ಬ್ಯೂಟಿ, ಸಂಸದೆ ಕಂಗನಾ ಒಪನ್ ಟಾಕ್!