ಇಂಡಿಯಾದಲ್ಲಿ ''ಸಿಗ್ನೇಚರ್​ ವೈನ್​'' ಮಾರಾಟ ಮಾಡುವುದು ಕಷ್ಟ ಎಂದ ರಿಕಿ ಪಾಟಿಂಗ್​: ಭಾರತ ಮಾರುಕಟ್ಟೆ ಬಗ್ಗೆ ಆಸ್ಟ್ರೇಲಿಯನ್​ ಕ್ರಿಕೆಟಿಗ ಹೀಗೆಳಿದ್ದೇಕೆ? | Signature Wine

dk (70) (1)
Published on

Signature Wine: ಭಾರತದ ಮಾರುಕಟ್ಟೆಯಲ್ಲಿ ಪ್ರವೇಶಿಸುವುದು ತುಂಬಾ ಕಷ್ಟವಾಗಿದ್ದು, ನಮ್ಮ ಸಿಗ್ನೇಚರ್​ ವೈನ್​ ಬ್ರ್ಯಾಂಡ್ ಮಾರಾಟ ಮಾಡಲು ಕಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

2020ರಲ್ಲಿ ರಿಕಿಪಾಟಿಂಗ್​ ಮತ್ತು ಅವರ ಪತ್ನಿ ರಿಯಾನಾ ಮತ್ತು ಆಸ್ಟೇಲಿಯಾಬನ್​ ವೈನ್ ತಯಾರಕ ಬೆನ್​ ರಿಗ್ಸ್​ ಜತೆಗೂಡಿ ಆರಂಭಿಸಿದ ಸಿಗ್ನೇಚರ್​ ವೈನ್​ ಬ್ರ್ಯಾಂಡ್​ ಅನ್ನು ಪಾಟಿಂಗ್​ ವೈನ್ಸ್​ ಎಂದು ಲೇಬಲ್​ ಹಾಕಿ ವೈನ್ಸ್​ ಉದ್ಯಮ ಆರಂಭಿಸಿದ್ದರು. ಮೊದಲು ನಾಲ್ಕು ವೈನ್​ಗೊಳೊಂದಿಗೆ ಆರಂಭವಾಗಿ 2023ರಲ್ಲಿ ಮೊದಲು ದೆಹಲಿಯ(ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಜತೆಗಿದ್ದಾಗ) ಮಾರುಕಟ್ಟೆಯನ್ನು ಪ್ರವೇಶಿಸಿತು.ಇದೀಗ ಇದರ ಬಗ್ಗೆ ಮಾತನಾಡಿರುವ ರಿಕಿ ಪಾಟಿಂಗ್​, ಭಾರತದ ಸುಂಕ ತೆರಿಗೆ ತೊಡಕುಗಳಿಂದಾಗಿ ದೆಹಲಿ ಮಾರುಕಟ್ಟೆ ಹೊರತುಪಡಿಸಿ ಭಾರತ ಮಾರುಕಟ್ಟೆ ಪ್ರವೇಶಿಸಲು ಕಷ್ಟಕರವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

''ನಾವು ನಿಧಾನವಾಗಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದೇವೆ. ಅಲ್ಲದೆ, ಭಾರತದ ವಿತರಣೆಯ ವಿಸ್ತರಣೆ ಬಹಳ ಜಟಿಲವಾಗಿದೆ. ಮಾರುಕಟ್ಟೆಯ ಪ್ರತಿಯೊಂದು ವಿಷಯದಲ್ಲೂ ಹಲವು ತೆರಿಗೆ ಮತ್ತು ಸುಂಕಗಳಿವೆ ಎಂದು ರಿಕಿ ಪಾಟಿಂಗ್​​, ಭಾರತ ಮಾರುಕಟ್ಟೆ ವಿಸ್ತಾರವಾಗಿದೆ. ಇಲ್ಲಿ ವಿಪುಲ ಅವಕಾಶಗಳಿವೆ ಎಂದು ಹೇಳುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ತನ್ನ ಬ್ರ್ಯಾಂಡ್​ ಪಾಟಿಂಗ್​ ವೈನ್ಸ್​ ವಿಸ್ತರಿಸುವ ನಿರೀಕ್ಷೆಯನ್ನು ತಳ್ಳಿ ಹಾಕಲಿಲ್ಲ''.

ಪಾಟಿಂಗ್​ ಅವರ ಸಿಗ್ನೇಚರ್​ ಲೇಬಲ್​ನ ಉತ್ಪನ್ನಗಳನ್ನು ಆಸ್ಟ್ರೇಲಿಯಾದ ನ್ಯೂ ಸೌತ್​ ವೆಲ್ಸ್​ನಲ್ಲಿ ಕ್ಯಾಲಬ್ರಿಯಾ ಫ್ಯಾಮಿಲಿ ವೈನ್ಸ್​ ವಿತರಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net