

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ ರೀತಿಯಲ್ಲಿ ಉಳಿತಾಯ ಮಾಡಲು ಅಥವಾ ಹಣವನ್ನು ದುಪ್ಪಟ್ಟು ಮಾಡಲು ಇಷ್ಟಪಡುತ್ತಾರೆ. ಆದರೆ, ಕೆಲವರಿಗೆ ಅದು ಹೇಗೆಂದು ಗೊತ್ತಿರುವುದಿಲ್ಲ. ಇನ್ನು ಕೆಲವರು ಇಂದಿನ ವಂಚಕರ ಜಾಲಕ್ಕೆ ಹೆದರಿ ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಲು ಹೆದರುತ್ತಾರೆ.
ಆದರೆ, ಕೆಲವೊಂದನ್ನು ಎಚ್ಚರಿಕೆಯಿಂದ ಅನುಸರಿಸಿದರೆ ಖಂಡಿತವಾಗಿ ಶ್ರೀಮಂತರಾಗಬಹುದು. ಅದರಲ್ಲಿ ಹಣಕಾಸಿನ ಯೋಜನೆ ಬಹಳ ಮುಖ್ಯವಾಗಿದೆ. ಸರಿಯಾದ ಯೋಜನೆಯ ಮೂಲಕ ಹಣವನ್ನು ಉಳಿತಾಯ ಮಾಡಬಹುದು. ನೀವು ಹೆಚ್ಚಿನ ಹಣವನ್ನು ಉಳಿಸಲು ಬಯಸುವುದಾದರೆ ಒಂದೊಳ್ಳೆ ಯೋಜನೆ ಖಂಡಿತವಾಗಿಯೂ ಅಗತ್ಯವಿದೆ.
ಅಂದಹಾಗೆ ನಿಮ್ಮ ಆದಾಯದ ಶೇ.50ರಷ್ಟನ್ನು ಮನೆಯ ಖರ್ಚಿಗೆ ಮೀಸಲಿಡಿ. 30% ಮನರಂಜನೆಗಾಗಿ ಮತ್ತು 20% ಹಣವನ್ನು ಉಳಿತಾಯ ಮಾಡಿ. ಈ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ನೀವು ಶ್ರೀಮಂತರಾಗಬಹುದು. ನಿಶ್ಚಿತ ಠೇವಣಿಗಳು ಖಂಡಿತವಾಗಿಯೂ ಶ್ರೀಮಂತರಾಗಲು ಉತ್ತಮ ಮಾರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಉಪಯೋಗ ಪಡೆದುಕೊಂಡರೆ ಖಂಡಿತ ಒಳಿತಾಗಲಿದೆ.
ಕೆಲವು ಯೋಜನೆಗಳು ಅಪಾಯ ಮುಕ್ತವಾಗಿವೆ. ಅಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಹಣ ಬರುತ್ತದೆ. ಖರ್ಚು ಮಾಡುವುದಕ್ಕಿಂತ ತುರ್ತು ನಿಧಿಯನ್ನು ಉಳಿಸುವುದು ಮುಖ್ಯವಾಗಿದೆ. ಭವಿಷ್ಯದಲ್ಲಿ ಎಷ್ಟು ವೆಚ್ಚವಾಗಲಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಜೀವ ವಿಮೆಯನ್ನೂ ತೆಗೆದುಕೊಳ್ಳಿ. ಜೀವ ವಿಮೆಯನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದ ತೊಂದರೆಗಳಿಂದ ನಿಮ್ಮನ್ನು ರಕ್ಷಿಸಬಹುದು.
ಇನ್ನು ಹೆಚ್ಚು ಗಳಿಸುವ ಅವಕಾಶಗಳನ್ನು ಹುಡುಕಿ. ಹೆಚ್ಚು ಗಳಿಸುವ ಎಲ್ಲ ಅವಕಾಶಗಳನ್ನು ಸಹ ನೀವು ಗಮನಿಸಬೇಕು. ಅರೆಕಾಲಿಕ ಉದ್ಯೋಗಗಳನ್ನು ಮಾಡುವ ಮೂಲಕ ನೀವು ಹೆಚ್ಚು ಗಳಿಸಬಹುದು. ನಿಮಗೆ ಸಮಯವಿದ್ದರೆ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಿ. ಅನಗತ್ಯವಾಗಿ ಹಣ ಖರ್ಚು ಮಾಡಬೇಡಿ. ಶ್ರೀಮಂತರಾಗಲು ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡಿ. ಚಿಕ್ಕ ವಯಸ್ಸಿನಿಂದಲೂ ಉಳಿತಾಯ ಮಾಡಿದರೆ ಹೆಚ್ಚು ಹಣ ಉಳಿಸಬಹುದು. ಇವುಗಳನ್ನು ಪಾಲಿಸಿದರೆ ಖಂಡಿತ ಶ್ರೀಮಂತರಾಗಬಹುದು. (ಏಜೆನ್ಸೀಸ್)