

ಬೆಂಗಳೂರು: ಇತ್ತೀಚೆಗೆ ಅಗಲಿದ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಸ್ಮರಣೆಗಾಗಿ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಶನ್ ಟ್ರಸ್ಟ್ ‘ಲಯ ಶ್ರದ್ಧಾಂಜಲಿ’ ಕಾರ್ಯಕ್ರಮ ಆಯೋಜಿಸಿದೆ.
ಜ.5ರ ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ಪರಿಷತ್ತಿನ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಧಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಕೊಳಲು ವಾದಕ ಪ್ರವೀಣ ಗೋಡ್ಕಿಂಡಿ, ಬಿಜೆಪಿ ನಾಯಕಿ ರೇಖಾ ಗೋವಿಂದ, ಹಿಂದೂಸ್ಥಾನಿ ಗಾಯಕ ಪಂಡಿತ್ ಮೃತ್ಯುಂಜಯ ಶೆಟ್ಟರ್ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಹಂಪಿಹೊಳಿ ಮ್ಯೂಸಿಕ್ ಶಾಲೆ ವಿದ್ಯಾರ್ಥಿಗಳಿಂದ ಲಯ ಗೌರವ, ಪಂಡಿತ್ ಪಂಚಾಕ್ಷರೇಶ್ವರ ಕಲಾವೇದಿಕೆ ವಿದ್ಯಾರ್ಥಿಗಳಿಂದ ಗಾನ ಗೌರವ, ಅಲಂಕೃತ ಸೆಂಟರ್ ವಿದ್ಯಾರ್ಥಿಗಳಿಂದ ನೃತ್ಯ ಗೌರವ ಕಾರ್ಯಕ್ರಮ ನಡೆಯಲಿದೆ. ವಿದುಷಿ ಪೂರ್ಣ ಆಚಾರ್ಯ, ಪಂ.ಅಮೃತೇಶ ಕುಲಕರ್ಣಿ, ಅಮಿತ್ ಭಟ್, ಪುನೀತ್ ರಾಣಾಪೂರ್ ಮುಂತಾದ ಕಲಾವಿದರು ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ ಎಂದು ಪಂ.ಸತೀಶ್ ಹಂಪಿಹೊಳಿ ತಿಳಿಸಿದ್ದಾರೆ.