ಸೋನಿಯಾ ಗಾಂಧಿ ನನಗೆ ಕೊಟ್ಟ ಪತ್ರ ಆಸ್ಕರ್, ನೊಬೆಲ್ ಪ್ರಶಸ್ತಿಗೆ ಸಮ ಎಂದ ರೇವಂತ್ ರೆಡ್ಡಿ: ಟೀಕಿಸಿದ ವಿರೋಧ ಪಕ್ಷಗಳು | Revanth Reddy

revanth Reddy
Published on

Revanth Reddy: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿಗೆ ನೀಡಿರುವ ಮೆಚ್ಚುಗೆಯ ಪತ್ರವನ್ನು ತಮ್ಮ ರಾಜಕೀಯ ಜೀವನದ ಅತ್ಯುನ್ನತ ಗೌರವ ಎಂದು ಬಣ್ಣಿಸಿದ್ದಾರೆ.

ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಮಾತನಾಡಿದರು. ತೆಲಂಗಾಣದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಜಾತಿ (ಎಸ್‌ಇಇಪಿಸಿ) ಸಮೀಕ್ಷೆಯ ಫಲಿತಾಂಶಗಳನ್ನು ಮಂಡಿಸಿದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.

ಈ ಮೆಚ್ಚುಗೆಯ ಪತ್ರ ಇದು ಆಸ್ಕರ್, ನೊಬೆಲ್ ಪ್ರಶಸ್ತಿಗೆ ಸಮನಾಗಿದ್ದು, ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗಿಂತ ಶ್ರೇಷ್ಠ. ಸರ್ಕಾರದಲ್ಲಿ ನನ್ನ ಸ್ಥಾನ ಏನೇ ಇರಲಿ, ಈ ಪತ್ರ ಅದಕ್ಕಿಂತ ವಿಶೇಷವಾಗಿ ಉಳಿಯುತ್ತದೆ ಎಂದು ರೆಡ್ಡಿ ಹೇಳಿದರು.

ಪತ್ರದಲ್ಲೇನಿದೆ?

ಸೋನಿಯಾ ಗಾಂಧಿ ನೀಡಿದ್ದಾರೆ ಎನ್ನಲಾದ ಪತ್ರದಲ್ಲಿ ರೇವಂತ್ ರೆಡ್ಡಿ ಅವರ ಆಡಳಿತವನ್ನು ಶ್ಲಾಘಿಸಿದೆ. ಇದರಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಉಪಕ್ರಮವಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಜಾತಿ (SEEPC) ಸಮೀಕ್ಷೆಯನ್ನು ಪೂರ್ಣಗೊಳಿಸಲಾಗಿಸಿರುವುದರ ಕುರಿತು ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ರೇವಂತ್ ರೆಡ್ಡಿಯವರ ಈ ಹೇಳಿಕೆಯು ವಿರೋಧ ಪಕ್ಷಗಳಿಂದ ಅಪಹಾಸ್ಯಕ್ಕೆ ಗುರಿಯಾಗಿದೆ.( ಏಜೆನ್ಸೀಸ್ )

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net