ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ ತೋರಿಸಿದ್ರೆ ರಾಜಕೀಯದಿಂದ ನಿವೃತ್ತಿ: ರಾಜೀವ್ ಚಂದ್ರಶೇಖರ್ ಹೇಳಿಕೆ

Rajeev Chandrashekhar
Published on

ಬೆಂಗಳೂರು: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಜಾರಿಗೆ ತಂದ ಯೋಜನೆಗಳಲ್ಲಿ ಎತ್ತಿ ತೋರಿಸಿದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿ‌ಯಲ್ಲಿ ಮಾತನಾಡಿದ ಅವರು, ಮೋದಿಯವರು ಎಲ್ಲರನ್ನು ಒಳಗೊಂಡ ವಿಕಾಸ ಬರೀ ಮಾತಿನಲ್ಲಲ್ಲ, ಕೃತಿಗೂ ಇಳಿಸಿದ್ದಾರೆ. ಎಲ್ಲ ಯೋಜನೆಗಳ ಫಲವನ್ನು ಹಿಂದು ಮುಸ್ಲಿಮ್, ಜಾತಿ ವರ್ಗ ಬೇಧವಿಲ್ಲದೆ ಹಂಚಿದೆ ಎಂದು ಹೇಳಿದರು.

ಸಂವಿಧಾನಕ್ಕೆ ವಿರುದ್ಧವಾದ ಧರ್ಮಾಧಾರಿತ ಮೀಸಲು ಸೌಲಭ್ಯವನ್ನು ಬಿಜೆಪಿ ಸದಾ ವಿರೋಧಿಸುತ್ತದೆ. ರಾಜ್ಯ ಸರ್ಕಾರ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲು ಕೈಬಿಟ್ಟು, ಬೇರೆ ವರ್ಗದಲ್ಲಿ ಸೇರಿಸಲಾಗಿದೆ. ಸರ್ಕಾರದ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಆದರೆ ಮೇ 9ಕ್ಕೆ ವಿಚಾರಣೆ ನಿಗದಿಪಡಿಸಿರುವ ಕಾರಣ ಅಲ್ಲಿಯವರೆಗೆ ಆದೇಶ ಜಾರಿಗೆ ತರುವುದಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ 'ಅಸತೋಮ ಸದ್ಗಮಯ' ಕಿರು ಹೊತ್ತಗೆ ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್, ಈ ಚುನಾವಣೆ ಕಾಂಗ್ರೆಸ್ ನ ಸುಳ್ಳುಗಳು ವರ್ಸಸ್ ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಎಂದು ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net