

ರಾಯಚೂರು: ಮುಸ್ಲಿಮರ 2ಬಿ ಮೀಸಲಾತಿಯನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಳ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಎಸ್‌ಡಿಪಿಐನಿಂದ ಶನಿವಾರ ನಗರದ ಏಕ್‌ಮಿನಾರ್ ವೃತ್ತದಿಂದ ಬೆಳಗಾವಿ ಚಲೋ ಜಾಥಾ ಆರಂಭಿಸಲಾಯಿತು.
ಹಿಂದುಳಿದ ವರ್ಗದ ಕಾಂತರಾಜ ಆಯೋಗದ ವರದಿ, ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಸಿದಂತೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಾರಸ್ಸು ಮಾಡಬೇಕು. ರಾಜ್ಯದಲ್ಲಿ ಶೇ.17ರಷ್ಟಿರುವ ಮುಸ್ಲಿಂ ಸಮಾಜಕ್ಕಿದ್ದ ಶೇ.4ರಷ್ಟು ಮೀಸಲಾತಿಯನ್ನು ಹಿಂದಿನ ಸರ್ಕಾರ ರದ್ದುಗೊಳಿಸಿದ್ದು, ಅದನ್ನು ಮರುಸ್ಥಾಪಿಸಿ ಶೇ.8ಕ್ಕೆ ಹೆಚ್ಚಿಸಲು ಅವೇಶನದಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಲ್ಲ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮಾಹಿತಿ ಸಂಗ್ರಹಿಸಿದ ಕಾಂತರಾಜ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿಯನ್ನು ಸ್ವೀಕರಿಸಿ ಶಿಾರಸ್ಸುಗಳನ್ನು ಜಾರಿಗೊಳಿಸಬೇಕು. ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಆನ್ಯಾಯ ಸರಿಪಡಿಸಲು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಾಥಾದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿಲಾನಿ ಪಾಷಾ, ಪದಾಕಾರಿಗಳಾದ ತೌಸ್ಿ ಅಹ್ಮದ್, ಬಷೀರ್, ಮತೀನ್ ಅನ್ಸಾರಿ, ಅಸೀಮುದ್ದೀನ್, ಮಹ್ಮದ್ ಶಫಿ, ಸೈಯದ್, ಅನ್ವರ್ ಪಾಷಾ ಪಾಲ್ಗೊಂಡಿದ್ದರು.