'ನನ್ನ ಸಾವಿಗೆ ನನ್ನ ಪತಿಯೇ ಕಾರಣ': ನಟನ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಪತ್ನಿ! | Allegations

Untitled design (2)
Published on

Allegations: ''ನನ್ನ ಸಾವಿಗೆ ನನ್ನ ಪತಿಯೇ ಕಾರಣ'' ಎಂದು ಮಲಿಯಾಳಂ ನಟ ಬಾಲಕುಮಾರ್ ವಿರುದ್ಧ ಆತನ ಪತ್ನಿಯೇ ಗಂಭೀರ ಆರೋಪ ಮಾಡಿದ್ದಾಳೆ.

ಹೌದು, ಬಾಲ ಅವರ ಮಾಜಿ ಪತ್ನಿ ಎಲಿಜಬೆತ್ ಉದಯನ್​, ಬುಧವಾರ ಆಸ್ಪತ್ರೆಯಿಂದ ಅತಂಕಕಾರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ವಿಡಿಯೋದಲ್ಲೇನಿದೆ?

ಆಸ್ಪತ್ರೆ ಬೆಡ್​ ಮೇಲೆ ಮಲಗಿರುವ ಎಲಿಜಬೆತ್ ಉದಯನ್​ಗೆ ಮೂಗಿನಲ್ಲಿ ಟ್ಯೂಬ್​ ಆಳವಡಿಸಿದ್ದು, ಸಾಕಷ್ಟು ಅಘಾತ ಮತ್ತು ಅಸಮಾಧಾನಗೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿರುವ ಅವರು, ''ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮ್ಮ ಅನುಭವವನ್ನು ವಿವರಿಸಿ ಪತ್ರವನ್ನು ಕಳುಹಿಸಿದ್ದಾರೆ. ಆದರೆ, ನಟನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಲ್ಲದೆ, ಬಾಲಾ ವಿರುದ್ಧದ ಪ್ರಕರಣದಲ್ಲಿ ಹೋರಾಡಲು ವಕೀಲರಿಗೆ ಹಣ ನೀಡುವ ಮೂಲಕ ತಮ್ಮ ಎಲ್ಲಾ ಹಣವನ್ನು ಖರ್ಚು ಮಾಡಿರುವುದಾಗಿಯೂ ಅವರು ಹೇಳಿದ್ದಾರೆ.

ನಾನು ಸಾಯುವ ಮುನ್ನ ನ್ಯಾಯ ಸಿಗುತ್ತದೆಯೇ?

ಮುಂದುವರೆದು ಮಾತನಾಡಿರುವ ಅವರು, ನಾನು ಸಾಯುವ ಮುನ್ನ ನನಗೆ ನ್ಯಾಯ ಸಿಗುತ್ತದಯೇ ಎಂದಿದ್ದಾರೆ. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ. ಅವರು ನನಗೆ ಬೆದಿರಕೆ ವಿಡಿಯೋ ಮಾಡಿದ್ದಾರೆ. ಅವರು ನನ್ನ ಕುಟುಂಬದ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಾನು ಸತ್ತರೆ ನಟ ಬಾಲನೇ ಕಾರಣ. ಇದಕ್ಕೆ ಅವರೇ ಜವಬ್ದಾರರು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಬಾಲಾ ಮತ್ತು ಎಲಿಜಬೆತ್ 2021ರಲ್ಲಿ ವಿವಾಹವಾದರು. ಆದರೆ 2024ರಲ್ಲಿ, ನಟ ಬಾಲ ತಾವು ಬೇರ್ಪಟ್ಟಿದ್ದೇವೆ ಎಂದು ಹೇಳಿಕೊಂಡರು.

ಬಳಿಕ ಈ ಮದುವೆ ಕಾನೂನುಬದ್ಧವಾಗಿಲ್ಲ ಮತ್ತು ಎಲಿಜಬೆತ್ ಅವರು ಅನಾರೋಗ್ಯದಿಂದ ಕೂಡಿದ್ದಾರೆ ನಟ ಬಾಲ ಈ ಹಿಂದೆ ಹೇಳಿದ್ದರು. ಅಲ್ಲದೆ, ಮತ್ತೊಂದೆಡೆ ಆಕೆಯ ಮೇಲೆ ದೌರ್ಜನ್ಯ, ಲೈಂಗಿಕ ದೌರ್ಜನ್ಯ ಮತ್ತು ದಾಂಪತ್ಯ ದ್ರೋಹದ ಆರೋಪ ಹೊರಿಸಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net