

ವಿಜಯಪುರ: ಗ್ರಾಮೀಣ ಭಾಗದ ರೈತರು ರೇಷ್ಮೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತಾಂತ್ರಿಕತೆ ಅಳವಡಿಸಿಕೊಂಡು, ಹೆಚ್ಚಿನ ಉತ್ಪಾದನೆ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ಗಮನಹರಿಸಿದ್ದಾರೆ ಎಂದು ವಿಜ್ಞಾನಿ ಡಾ.ಮುನಿಶಾಮಿರೆಡ್ಡಿ ತಿಳಿಸಿದರು.
ಪಟ್ಟಣಲ್ಲಿರುವ ಕೇಂದ್ರ ರೇಷ್ಮೆ ಬೀಜೋತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ್ದ ಸ್ವಿಟ್ಜರ್ಲೆಂಡ್‌ನ ರೈತರ ತಂಡಕ್ಕೆ ದ್ವಿತಳಿ ರೇಷ್ಮೆಗೂಡು ಬೀಜೋತ್ಪಾದನೆ ಕುರಿತು ಮಾಹಿತಿ ನೀಡಿದರು.
ದ್ವಿತಳಿ ರೇಷ್ಮೆಮೊಟ್ಟೆ ಉತ್ಪಾದನೆ, ಗೂಡು ಖರೀದಿ, ಎಷ್ಟು ದಿನಕ್ಕೆ ಮೊಟ್ಟೆಯಿಂದ ಹುಳು ಹೊರಗೆ ಬರುತ್ತದೆ, ಮೊಟ್ಟೆ ತಯಾರು ಮಾಡಿದ ನಂತರ ಎಷ್ಟು ದಿನಗಳವರೆಗೆ ಅದನ್ನು ಸಂರಕ್ಷಣೆ ಮಾಡುವುದು, ಹುಳು ಸಾಕಣೆ ಮನೆಗಳಲ್ಲಿ ವಾತಾವರಣ ಹೇಗಿರಬೇಕು, ಹಿಪ್ಪುನೇರಳೆ ಸೊಪ್ಪಿನ ಬೆಳವಣಿಗೆ ಸೇರಿ ಅನೇಕ ಮಾಹಿತಿ ನೀಡಿಸಲಾಯಿತು.
ದೇಶಿ ತಳಿ ಗೂಡಿಗಿಂತ ದ್ವಿತಳಿ ರೇಷ್ಮೆಗೂಡು ಬೆಳೆದರೆ ವಿದೇಶಿ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ರೈತರು ವೈಜ್ಞಾನಿಕ ಪದ್ಧತಿಗಳಿಂದ ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಗಳಿಸುವ ಬಗ್ಗೆ ರೈತರು ಕೃಷಿಗೆ ಪೂರಕವಾದ ರೇಷ್ಮೆ ಕೃಷಿಗೆ ಸುಧಾರಿತ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ವಿಡ್ಜರ್‌ಲ್ಯಾಂಡ್ ತಂಡದ ರೈತ ನಾಯಕ ಫ್ರಿಟ್ಜ್ ಷ್ನೇಯ್ಡರ್ ಸ್ಕೆಂಡರ್‌ಪ್ರೇಡ್‌ಬೆಲ್, ಮಾರ್ಟಿನ್, ಹೆಡೆಲ್ ಮುಲ್ಫ್ ಇದ್ದರು.