ಪಾಳು ಬಾವಿಗೆ ಬಿದ್ದ ಹೋರಿ ರಕ್ಷಣೆ

New Project (1)
Published on

ಉಳ್ಳಾಲ: ಆವರಣ ಗೋಡೆಯಿಲ್ಲದೆ ಪಾಳು ಬಿದ್ದಿರುವ ಸರ್ಕಾರಿ ಬಾವಿಗೆ ಹೋರಿಯೊಂದು ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಲ್ಲ ಎಂಬಲ್ಲಿ ಆವರಣಗೋಡೆ ಇಲ್ಲದ ತೆರೆದ ಸರ್ಕಾರಿ ಬಾವಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದ್ದು, ಶನಿವಾರ ಸಂಜೆ ಬಾವಿಯ ಸಮೀಪ ಹೋರಿಗಳೆರಡು ಗುದ್ದಾಡಿದ್ದು, ಈ ಸಂದರ್ಭ ಒಂದು ಹೋರಿ ಬಾವಿಯೊಳಗೆ ಬಿದ್ದಿದೆ.

ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಉದಯ ಗಟ್ಟಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನು ಮೇಲಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾವಿಗೆ ಆವರಣ ಗೋಡೆ ನಿರ್ಮಿಸದೆ ನಿರ್ಲಕ್ಷ್ಯ ತಾಳಿರುವ ಪುರಸಭೆಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net