ಸರ್ಕಾರಿ ಬಸ್ ಸಂಚಾರ ಆರಂಭಿಸಲು ಮನವಿ

New Project (20)
Published on

ಗುರುಪುರ: ಮಂಗಳೂರು ತಾಲೂಕಿನ ಕುಪ್ಪೆಪದವು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕುಪ್ಪೆಪದವು-ಬೊಳಿಯ-ಇರುವೈಲು ಮಾರ್ಗವಾಗಿ ಸರ್ಕಾರಿ ಬಸ್‌ಸಂಚಾರ ಆರಂಭಿಸಲು ಆಗ್ರಹಿಸಿ ಕುಪ್ಪೆಪದವು ನಾಗರಿಕ ಹೋರಾಟ ಸಮಿತಿ ಶುಕ್ರವಾರ ಮಂಗಳೂರು ವಿಭಾಗದ ಕೆಎಸ್ಸಾರ್ಟಿಸಿ ಡಿಸಿ ರಾಜೇಶ್ ಶೆಟ್ಟಿ ಅವರಿಗೆ ಮನವಿ ನೀಡಲಾಯಿತು.

ಗ್ರಾಮೀಣ ಪ್ರದೇಶಗಳಿಗೆ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪೂರಕ ಕೆಲಸ ಮಾಡುತ್ತಿದೆ. ಪ್ರಸಕ್ತ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ರಾಜೇಶ್ ಶೆಟ್ಟಿ ಹೇಳಿದರು.

ಹೋರಾಟ ಸಮಿತಿ ಮಾರ್ಗದರ್ಶಕ ಮುನೀರ್ ಕಾಟಿಪಳ್ಳ, ಗೌರವಾಧ್ಯಕ್ಷ ಸದಾಶಿವದಾಸ್, ಅಧ್ಯಕ್ಷ ಹಸನ್ ಬಾವ ಮಾಣಿಪಲ್ಲ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಾಫ ಕಾಡ್ಯಕಾರ್, ಉಪಾಧ್ಯಕ್ಷರಾದ ನೌಪಾಲ್ ಎನ್.ಎಸ್, ಶಾಲಿ ಕುಪ್ಪೆಪದವು, ವಸಂತಿ ಕುಪ್ಪೆಪದವು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net