

ಸುಳ್ಯ: ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ಕೊಡುಗೆಗಳನ್ನು ಪರಿಗಣಿಸಿ ಅವರ ಪ್ರತಿಮೆಯನ್ನು ವಿಕಾಸ ಸೌಧದ ಮುಂಭಾಗ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಸುಳ್ಯದ ಗೌಡರ ಸೇವಾ ಸಂಘ ಮುಂದಿರಿಸಿದ್ದು, ಮನವಿಯನ್ನು ತಹಸೀಲ್ದಾರ್ ಮಂಜುಳಾ ಎಂ. ಮೂಲಕ ಸರ್ಕಾರಕ್ಕೆ ಸಲ್ಲಿಸಿದೆ.
ಬಿಸಿಯೂಟದಂತಹ ಹಲವು ಯೋಜನೆ ಜಾರಿಗೆ ತಂದಿರುವ ಎಸ್.ಎಂ.ಕೃಷ್ಣ, ಬೆಂಗಳೂರಿನಲ್ಲಿ ವಿಕಾಸಸೌಧ ನಿರ್ಮಿಸಲು ಕಾರಣಕರ್ತ. ಬೆಂಗಳೂರನ್ನು ಐಟಿಪಾರ್ಕ್ ಮಾಡುವಲ್ಲಿ ಯಶಸ್ವಿಯಾದವರು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ನಿಕಟಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಗೌಡ ಸಂಘದ ನಿರ್ದೇಶಕ ಸುಪ್ರೀತ್ ಮೋಂಟಡ್ಕ, ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ, ಕಾರ್ಯದರ್ಶಿ ಸನತ್ ಪೆಲ್ಲಡ್ಕ, ಎಂ.ಜೆ.ಶಶಿಧರ್, ಶಿವರಾಮ ಕೇರ್ಪಳ, ಶಿವಪ್ರಸಾದ್ ಬಾಳೆಕೋಡಿ, ವೆಂಕಟ್ರಮಣ ಮಡ್ತಿಲ ಇದ್ದರು.