ಬಸ್ ತಂಗುದಾಣ ದುರಸ್ತಿ

busstand
Published on

ಸುಳ್ಯ: ಅಂಬೆಟಡ್ಕದ ವಿವೇಕಾನಂದ ವೃತ್ತದ ಬಳಿಯಿರುವ ಬಸ್ ತಂಗುದಾಣ ದುರಸ್ತಿಗೊಂಡು ಸುಂದರವಾಗಿ ಕಂಗೊಳಿಸುತ್ತಿದೆ.

ಹಲವು ವರ್ಷಗಳ ಹಿಂದೆ ಕ್ಯಾಂಪ್ಕೋ ಸಂಸ್ಥೆ ಈ ಬಸ್ ತಂಗುದಾಣ ನಿರ್ಮಿಸಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಕಳೆಗುಂದಿದಂತೆ ಕಾಣುತ್ತಿತ್ತು.

ಮತ್ತೆ ಕ್ಯಾಂಪ್ಕೋ ಸಂಸ್ಥೆ ಮುತುವರ್ಜಿ ವಹಿಸಿ ಹೊಸ ವಿನ್ಯಾಸವನ್ನು ಅಳವಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

ಈ ಬಸ್ ತಂಗುದಾಣ ಕಾಂತಮಂಗಲ, ಮೇನಾಲ, ಅಜ್ಜಾವರ, ಮಂಡೆಕೋಲಿಗೆ ಹೋಗುವವರಿಗೆ ಮಳೆ, ಬಿಸಿಲಿಗೆ ಆಶ್ರಯ ಒದಗಿಸುತ್ತಿತ್ತು. ಸನಿಹದಲ್ಲೇ ಕೆವಿಜಿ ವಿದ್ಯಾ ಸಂಸ್ಥೆ ಹಾಗೂ ಇತರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಹೋಗುವವರಿಗೆ ಅನುಕೂಲ ಕಲ್ಪಿಸುತ್ತಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಸೊರಗಿರುವುದನ್ನು ಗಮನಿಸಿದ ಕ್ಯಾಂಪ್ಕೋ ಸಂಸ್ಥೆ ಬಸ್ ತಂಗುದಾಣ ದುರಸ್ತಿಗೊಳಿಸಿ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net