ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ಗ್ಯಾಂಗ್‍ನ ಮತ್ತಿಬ್ಬರು ಅರೆಸ್ಟ್

a
Published on

ಚಿತ್ರದುರ್ಗ: ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿರುವ ರೇಣುಕಾಸ್ವಾಮಿ (34) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳು ಚಿತ್ರದುರ್ಗದ ದಿವೈಎಸ್​ಪಿ ಕಚೇರಿಗೆ ಶುಕ್ರವಾರ ಶರಣಾಗಿದ್ದಾರೆ.

ಇದನ್ನೂ ಓದಿ: ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ಶಾಲೆಗಳನ್ನು ಆರಂಭಿಸಲು ಜಮ್ಮು ಕಾಶ್ಮೀರ ಸರ್ಕಾರ ಸೂಚನೆ!

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಗ್ಯಾಂಗ್​ನ ಎ6 ಆರೋಪಿ ಜಗದೀಶ್ ಅಲಿಯಾಸ್​ ಜಗ್ಗ (34), ಎ7 ಆರೋಪಿ ಅನಿಲ್ ಕುಮಾರ್ ಅಲಿಯಾಸ್​ ಅನು (25) ಹಾಗೂ ಶುಕ್ರವಾರ ಪೊಲೀಸರಿಗೆ ಶರಣಾಗಿದ್ದಾರೆ.

ದರ್ಶನ್ ಅಭಿಮಾನದ ಸಂಘದ ಅಧ್ಯಕ್ಷ ರಘು ಹಾಗೂ ಚಿತ್ರದುರ್ಗ ಜಿಲ್ಲಾ ಕೇಂದ್ರದ ರೈಲ್ವೆ ಸ್ಟೇಷನ್ ನಿವಾಸಿ ಆಟೋ ಜಗ್ಗ ಹಾಗೂ ಸಿಹಿ ನೀರು ಹೊಂಡದ ನಿವಾಸಿ ಅನು ಎಂಬುವವರು ಕಾರನ್ನ ಬಾಡಿಗೆಗೆ ತೆಗೆದುಕೊಂಡಿದ್ದರು. ಪ್ರಕರಣ ಬಯಲಾಗುತ್ತಿದ್ದಂತೆ ಜಗ್ಗ ಮತ್ತು ಅನು ತಲೆ ಮರೆಸಿಕೊಂಡಿದ್ದ. ಪೊಲೀಸರು ಈತನಿಗಾಗು ಹುಡುಕಾಟ ನಡೆಸಿದ್ದರು.

ರವಿ ಎಂದು ಗುರುತಿಸಲಾದ ಆರೋಪಿ ಗುರುವಾರ ಸಂಜೆ ಡಿವೈಎಸ್ ಪಿ ಮುಂದೆ ಶರಣಾಗಿದ್ದ. ಇದರ ಬೆನ್ನೆಲ್ಲೇ ಜಗ್ಗ, ಅನು ಕೂಡ ಶುಕ್ರವಾರ ಚಿತ್ರದುರ್ಗದ ಡಿವೈಎಸ್​ಪಿ ಕಚೇರಿಗೆ ಬಂದು ಶರಣಾಗಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಸೇರಿದಂತೆ 16 ಮಂದಿಯನ್ನು ಬಂಧಿಸಲಾಗಿದೆ. ಜೂನ್ 8 ರಂದು ರಾತ್ರಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದಂತೆ ದರ್ಶನ್ ಮತ್ತು ಆತನ ತಂಡವನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net