ಜೈಲಲ್ಲಿರುವ ದರ್ಶನ್‌ ಮತ್ತೊಂದು ಫೋಟೋ ಲೀಕ್; ನಿನ್ನೆ ಕೈಲಿ ಸಿಗ್ರೇಟ್​ ಇಂದು ಮೊಬೈಲ್

darshan (3)
Published on

ಬೆಂಗಳೂರು:​ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಸ್ಯಾಂಡಲ್​ವುಡ್ ನಟ ದರ್ಶನ್  ಆತನನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಡಿ ಗ್ಯಾಂಗ್​ ಜೈಲಿನಲ್ಲಿದೆ. ಈ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹೀಗೆ ಇರುವಾಗಲೇ ಈಗ ಕೆಲವು ಫೋಟೋ ಹಾಗೂ ವಿಡಿಯೋಗಳು ಮತ್ತೊಂದು ಹಂತದಲ್ಲಿ ಸುದ್ದಿ ಮಾಡುತ್ತಿವೆ. ನಿನ್ನೆ ಒಂದು ಫೋಟೋ ವಿಡಿಯೋ ಆದ್ರೆ ಇಂದೂ ಒಂದು ಫೋಟೋ ವೈರಲ್​​ ಆಗಿದೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ನಿನ್ನೆ ದರ್ಶನ ತನ್ನ ಸಹಚರರ ಜೊತೆ ಕುಳಿತು ಸಿಗರೇಟ್ ಎಳೆಯುತ್ತಿರುವ ಫೋಟೋವೊಂದು ವೈರಲ್ ಆಗಿತ್ತು. ಸ್ವಲ್ಪ ಸಮಯ ರೌಡಿಶೀಟರ್​ ಜತೆ ವಿಡಿಯೋ ಕಾಲ್​ ಮಾಡಿರುವ ವಿಡಿಯೋ ಕೂಡಾ ಸಂಚಲ ಸೃಷ್ಟಿ ಮಾಡಿತ್ತು.

ಈಗ ಮತ್ತೊಂದು ಫೋಟೋ ಸಿಕ್ಕಿದ್ದು, ಈ ಫೋಟೋದಲ್ಲಿ ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿದ್ದು, ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಚಾಟ್ ಮಾಡುತ್ತಿರುವ ದೃಶ್ಯವಿದೆ. ಇದು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ದರ್ಶನ್‌ ಜೈಲಿನಲ್ಲಿ ಆರಾಮವಾಗಿಯೇ ಇದ್ದಾರೆ ಎನ್ನುವ ಎಂಬ ಮಾಹಿತಿ ಸಿಕ್ಕಿದೆ. ಈ ಘಟನೆಯಿಂದ ಇದರಿಂದ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಮುಖ ಬಯಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net