ಸಿರಿಗೆ ಕೊಟ್ರಪಾಡಿ ದೇವಳ ನೇರ ಸಂಬಂಧ : ಭಾಸ್ಕರ ಭಟ್ ಹೇಳಿಕೆ

New Project (15)
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ತುಳುನಾಡಿನ ವೀರ ಮಹಿಳೆ ತುಳುನಾಡ ಸಿರಿಗೆ ಕೊಟ್ರಪಾಡಿ ಲಕ್ಷ್ಮೀಜನಾರ್ದನ ದೇವಸ್ಥಾನ ನೇರ ಸಂಬಂಧ ಹೊಂದಿದ್ದು, ಅತ್ಯಂತ ಕಾರಣಿಕದ ಕ್ಷೇತ್ರವಾಗಿದೆ. ಇಲ್ಲಿನ ಮುಕ್ಕಡಪ್ಪುನಲ್ಲಿ ಸಿರಿಯು ಕುಳಿತ ಪನ್ನೆದತ್ರ ಎಂಬ ಚಾಪೆ, ಆಕೆಯ ಬಳಿ ಇದ್ದ ಬಟ್ಟೆಯ ಗಂಟು ಮತ್ತಿತರರ ವಸ್ತುಗಳು ಅದೇ ಆಕಾರದಲ್ಲಿ ಶಿಲೆಯಾಗಿ ಕಾಣಸಿಗುತ್ತವೆ. ಹಾಗಾಗಿ ಈ ದೇವಳದ ನವೀಕರಣ ಅಗತ್ಯ ಎಂದು ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪಂಜ ಭಾಸ್ಕರ ಭಟ್ ಹೇಳಿದರು.

ಮೂಡು ಕೊಟ್ರಪಾಡಿಗುತ್ತು ಶ್ರೀ ಲಕ್ಷ್ಮೀಜನಾರ್ದನ ಶ್ರೀ ಬ್ರಹ್ಮಲಿಂಗೇಶ್ವರ ಹಾಗೂ ಸಪರಿವಾರ ಕ್ಷೇತ್ರದ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನ ನವೀಕರಣ ಹಾಗೂ ಬ್ರಹ್ಮಕಲಶೋತ್ಸವ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಶಿಲಾನ್ಯಾಸ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಬರೂರು ವೇದವ್ಯಾಸ ತಂತ್ರಿ, ಪುರುಷೋತ್ತಮ ಭಟ್, ಜಯ ಎನ್.ಶೆಟ್ಟಿ, ಶೇಖರ ಟಿ.ಶೆಟ್ಟಿ, ಮಹಾಲಕ್ಷ್ಮೀ ಎ.ಶೆಟ್ಟಿ, ರಘುವೀರ್ ಶೆಟ್ಟಿ, ಸುಭಾಷ್ ಚಂದ್ರ ಹೆಗ್ಡೆ, ಶಂಭು ಎನ್.ಶೆಟ್ಟಿ, ಸುಖಾನಂದ ಶೆಟ್ಟಿ, ರಾಜಾರಾಮ ಶೆಟ್ಟಿ, ರಾಜೇಂದ್ರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶ್ಯಾಮ್ ಶೆಟ್ಟಿ, ಸತೀಶ್ ಎಂ.ಶೆಟ್ಟಿ, ಶಾಂತರಾಮ ಎನ್.ಶೆಟ್ಟಿ, ಸಂತೋಷ್ ಶೆಟ್ಟಿ, ಶರತ್ ಹೆಗ್ಡೆ, ಮಲ್ಲಿಕಾ ಯಶವಂತ ಶೆಟ್ಟಿ, ಶ್ವೇತಾ ಚಂದ್ರಹಾಸ ರೈ, ರೋಹಿಣಿ ಬಿ.ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ಶಶಿಕಾಂತ್ ಶೆಟ್ಟಿ, ಉದಯ ಜೆ.ಶೆಟ್ಟಿ, ಕಿಶೋರ್ ಜೆ.ಶೆಟ್ಟಿ, ಸುಜಿತ್ ಶೆಟ್ಟಿ, ಸಿ.ಎ.ರಮೇಶ್ ಶೆಟ್ಟಿ, ಸುಷ್ಮಾ ಪಿ.ಶೆಟ್ಟಿ, ಆಶಾಕೀರ್ತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net