

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆ ಮಾ.30ರಿಂದ ಏ.2ರವರೆಗೆ ವಿವಿಧ ಹೋಮ ಹವನ, ಧಾರ್ಮಿಕ ವಿಧಿಗಳೊಂದಿಗೆ ನಡೆದು 3ರಂದು ಬೆಳಗ್ಗೆ 9.20ಕ್ಕೆ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ದೇಗುಲ ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ ಹೇಳಿದರು.
ದೇಗುಲ ಪ್ರಾಂಗಣದಲ್ಲಿ ಭಾನುವಾರ ಜೀರ್ಣೋದ್ಧಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಉಪಸ್ಥಾನ ಗಣಪತಿ, ಉತ್ಸವ ಮೂರ್ತಿಯೊಂದಿಗೆ ಭತ್ತದ ಧಾನ್ಯದೊಂದಿಗಿನ ಬೆಳ್ಳಿಯ ಕಲಶ ಬಾಲಾಲಯದಲ್ಲಿ ಸ್ಥಾಪಿಸಿ ಅಹರ್ನಿಷಿ ಪೂಜೆ ನಡೆಯಲಿರುವುದು. ಮೂಲ ರುದ್ರ ದೇವರ ಸಾನ್ನಿಧ್ಯ ಮೂಲಸ್ಥಾನದಲ್ಲಿರಿಸಿ ಸುತ್ತಲೂ ಪಂಜರದ ಆವರ್ಕ ನಿರ್ಮಿಸಿ ಪೂಜಿಸಲಾಗುವುದು. ಮುಂದೆ ಕರಸೇವೆಯೊಂದಿಗೆ ಹಳೇ ರಚನೆ ತೆಗೆಯಬೇಕಿದೆ. ದೇಗುಲದ ಪುನಃ ನಿರ್ಮಾಣಕ್ಕೆ ಒಂದು ವರ್ಷದ ಅವಧಿ ಇದೆ. ಕಾಪು ಅಮ್ಮನ ಜೀರ್ಣೊದ್ಧಾರ ಸಂಕಲ್ಪಗಳಲೆಲ್ಲವೂ ನವ ಸಂಖ್ಯೆಯಿಂದಲೇ ಪೋಣಿಸಿಕೊಂಡು ಬಂದಂತೆ ಮುಂದೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಜೀರ್ಣೋದ್ಧಾರ ಸಂಕಲ್ಪ ಏಕಾದಶ ಸಂಖ್ಯೆಯಿಂದ ನಡೆಯಲಿರುವುದಾಗಿ ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ರವೀಂದ್ರನಾಥ ಜಿ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇಗುಲ ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಅರ್ಚಕ ಗುರುರಾಜ ಭಟ್, ವೈ.ದಿನೇಶ್ ಆಚಾರ್ಯ, ನಟರಾಜ ಪಿ.ಎಸ್., ಗುತ್ತಿನಾರ್ ಕೃಷ್ಣ ಶೆಟ್ಟಿ, ಡಾ.ವೈ.ಎನ್.ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪಿ.ಕೆ.ಸದಾನಂದ, ಸುಕುಮಾರ್ ಶ್ರೀಯಾನ್, ರಾಜೇಂದ್ರ ಶೆಣೈ, ರಮಾಕಾಂತ ದೇವಾಡಿಗ, ಶ್ರೀ ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ ವೈ.ಎನ್.ರಾಮಚಂದ್ರ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ದೇಗುಲ ನಿರ್ಮಾಣ ತಜ್ಞ ವಿಷ್ಣುಮೂರ್ತಿ ಭಟ್ ಕರಸೇವೆ ಬಗ್ಗೆ ಸೂಚನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ ಇದ್ದರು. ನವೀನ್ ಚಂದ್ರ ಜೆ.ಶೆಟ್ಟಿ ಸ್ವಾಗತಿಸಿದರು. ಶ್ರೀಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ವಂದಿಸಿದರು.
ಖಡ್ಗೇಶ್ವರಿ ಸನ್ನಿಧಾನದ ನವರಾತ್ರಿ ತಂಬಿಲ, ಅಜೆಕಾಯಿ ಸೇವೆಯಂತಹ ಸೇವೆ ನಿರಂತರ ನಡೆಯಲಿರುವುದು. ಶಿವಳ್ಳಿ ಬ್ರಾಹ್ಮಣ ಸಮಾಜ ವತಿಯಿಂದ ದೇಗುಲದ ತೀರ್ಥ ಮಂಟಪ ನಿರ್ಮಿಸುವರು. -ವೈ.ಎನ್.ರಾಮಚಂದ್ರ ರಾವ್, ಶ್ರೀ ವನದುರ್ಗಾ ಟ್ರಸ್ಟ್ ಕಾರ್ಯದರ್ಶಿ https://www.vijayavani.net/stronger-india-through-good-education https://www.vijayavani.net/tuluveshwara-temple-on-the-verge-of-extinction