ಶಾಲಾವರಣದಲ್ಲಿ ಗುಂಡಿ ತೆಗೆದು ಮಕ್ಕಳಿಗೆ ಸಮಸ್ಯೆ

hbr (11)
Published on

ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರ ಮುಳ್ಳುಗುಡ್ಡೆ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಖಾಸಗಿ ವ್ಯಕ್ತಿಗಳು ಅಲ್ಲಲ್ಲಿ ಗುಂಡಿ ತೋಡಿದ್ದು, ಮಕ್ಕಳಿಗೆ ಓಡಾಡಲು ಸಮಸ್ಯೆಯಾಗಿದೆ. ಹಿಂದೆ ಈ ಜಾಗವನ್ನು ಶಾಲೆಗೆ ದಾನವಾಗಿ ನೀಡಲಾಗಿತ್ತು. ಇದೀಗ ಈ ಜಾಗದಲ್ಲಿ ವ್ಯಕ್ತಿಗಳಿಬ್ಬರು ಗಿಡಗಳನ್ನು ನಡೆಲು ಗುಂಡಿ ತೋಡಿದ್ದು, ಮಕ್ಕಳು ಹಾಗೂ ಶಿಕ್ಷಕರಿಗೆ ಅಲ್ಲಿಗೆ ಬರದಂತೆ ತಡೆಯೊಡ್ಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ವಾಡಲು ಸಮಸ್ಯೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಾಲಾಡಳಿತ ಪರಿಷತ್ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನದಾಸ ನಾಯಕ್ ಉಡುಪಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಭೂಮಿ ಅಗೆದು ಗುಂಡಿ ನಿರ್ಮಿಸಿರುವ ವ್ಯಕ್ತಿಗಳಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಣ ಸಚಿವರು, ಉಸ್ತುವಾರಿ ಸಚಿವರು, ಪೊಲೀಸ್ ಅಧೀಕ್ಷಕರು, ಸಹಾಯಕ ಕಮಿಷನರ್, ಕಾರ್ಕಳ ಪೊಲೀಸ್ ಸಹಾಯಕ ಅಧೀಕ್ಷಕ, ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ, ಹೆಬ್ರಿ ತಹಸೀಲ್ದಾರ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ದೂರು ನೀಡಲಾಗಿದೆ.

ಶಾಲೆಯಲ್ಲಿ ನಡೆದಿರುವ ಬಗ್ಗೆ ವಿಚಾರ ತಿಳಿದುಕೊಳ್ಳಲು ಕಾರ್ಕಳ ಎಎಸ್‌ಪಿ ಅವರಿಗೆ ಸೂಚಿಸಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹರಿರಾಂ ಶಂಕರ್, ಉಡುಪಿ ಎಸ್‌ಪಿ https://www.vijayavani.net/ready-for-community-building-work https://www.vijayavani.net/balladi-temple-renovation-preparatory-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net