ಹೊಸ ಸಾಧಕರಿಗೆ ರೆಮೊನಾ ಪಿರೇರಾ ಪ್ರೇರಣೆ - ಅಭಿನಂದನಾ ಸಮಾರಂಭದಲ್ಲಿ ಡಾ.ಪ್ರವೀಣ್ ಮಾರ್ಟಿಸ್

mng--31 Aug remona Abinandana
Published on

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೊದಲ ವಿಶ್ವ ದಾಖಲೆಯನ್ನು ರೆಮೋನಾ ಇವೆಟ್ಟಾ ಪಿರೇರಾ ಮಾಡಿದ್ದಾರೆ. ಸಾಧನೆಗೆ ಸಾಕ್ಷಿಯಾದ ವೇದಿಕೆಗೆ ಅವರ ಹೆಸರಿಡಲು ನಿರ್ಧರಿಸಲಾಗಿದೆ. ಹೊಸ ಸಾಧಕರಿಗೆ ರೆಮೋನಾ ಪ್ರೇರಣೆಯಾಗಿದ್ದಾರೆ ಎಂದು ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಲಯದ ಕುಲಪತಿ ವಂ.ಡಾ. ಪ್ರವೀಣ್ ಮಾರ್ಟಿಸ್ ಹೇಳಿದರು.

170 ಗಂಟೆಗಳ ಭರತನಾಟ್ಯದ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ ರೆಮೋನಾ ಅವರಿಗೆ ಭಾನುವಾರ ನಗರದ ಸಂತ ಅಲೋಶಿಯಸ್ ವಿಶ್ವ ವಿದ್ಯಾನಿಯದ ಎಲ್‌ಸಿಎಫ್ ಸಭಾಂಗಣದಲ್ಲಿ ಸೌರಭ ಸಂಗೀತ ನೃತ್ಯ ಕಲಾ ಪರಿಷತ್ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಿರಿಯ ನಾಟ್ಯಚಾರ್ಯ ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ, ರೆಮೋನಾ ಒಳ್ಳೆಯ ಕಲಾವಿದೆಯಾಗಿದ್ದು, ಅವಳಿಗೆ ಉತ್ತಮ ಭವಿಷ್ಯವಿದೆ ಎಂದರು.

ವಿಜಯನಗರದ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಡಾ.ಎ.ಮೋಹನ ಕುಂಟಾರ್ ಶುಭಹಾರೈಸಿದರು. ಸಂತ ಅಲೋಶಿಯಸ್ ವಿವಿಯ ಕುಲ ಸಚಿವ ಡಾ.ಆಲ್ವಿನ್ ಡೆಸಾ, ಲಿಂಗತ್ವ ಅಲ್ಪ ಸಂಖ್ಯಾತರಾದ ನಿಕಿಲಾ, ರೆಮೊನಾ ಅವರ ತಾಯಿ ಗ್ಲ್ಯಾಡಿಸ್ ಪಿರೇರಾ ಮತ್ತಿತರರು ಇದ್ದರು.

ನೃತ್ಯಗುರು ಡಾ.ಶ್ರೀವಿದ್ಯಾ ಮುರಳೀಧರ್ ಸ್ವಾಗತಿಸಿ, ರೆಮೋನಾ ಇವೆಟ್ ಪಿರೇರಾ ವಂದಿಸಿದರು. ವಾರುಣಿ ನಾಗರಾಜ್ ಮಂಗಳಾದೇವಿ ಹಾಗೂ ಚಿರಾಗ್ ಬಜಾಲ್ ನಿರೂಪಿಸಿದರು.

ನೃತ್ಯದಿಂದ ಸಂಸ್ಕಾರ

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ನ್ಯತ್ಯದಿಂದ ಸಂಸ್ಕಾರವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಜೀವನ ಸುಂದರವಾಗಿ ರೂಪಿಸುವ ಜತೆಗೆ ಮನಸ್ಸಿಗೆ ನೆಮ್ಮದಿ ಒದಗಿಸುತ್ತದೆ. ಭರತನಾಟ್ಯದಿಂದ ಏಕಾಗ್ರತೆ ಮೂಡಲು ಸಾಧ್ಯ. ಜೀವನದಲ್ಲಿ ಛಲ ಹಾಗೂ ಏಕಾಗ್ರತೆ, ತಾಯಿ, ಗುರುಗಳ ಆಶೀರ್ವಾದ ಇದ್ದರೆ ಸಾಧಿಸಲು ಸಾಧ್ಯ ಎಂಬುವುದನ್ನು ರೆಮೋನಾ ದೃಢಪಡಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net