ಮದುವೆ ದಿನವೇ ಮೂರ್ಛೆ ಹೋಗಿದ್ದೆವು, ನಂತರ ಮದ್ಯವೂ ಸೇವಿಸಿದ್ದೆ!: ಅಚ್ಚರಿ ಘಟನೆ ನೆನಪಿಸಿದ ನಟಿ ನೀತೂ ಕಪೂರ್​

1292312
Published on

ಮುಂಬೈ: ಬಾಲಿವುಡ್​ ನಟ ರಿಶಿ ಕಪೂರ್​​ ಅಗಲಿದ ಬಳಿಕ ನೀತೂ ಕಪೂರ್​ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್​ ಆಗಿದ್ದಾರೆ. ಈ ಬಗ್ಗೆಯೂ ಟ್ರೋಲ್​ ಆಗಿದ್ದ ಹಿರಿಯ ನಟಿ ಮತ್ತೊಂದು ನೀಡುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ.

ತಮ್ಮ ಮದುವೆ ದಿನವನ್ನು ನೆನಪಿಸಿಕೊಂಡಿರುವ ನಟಿ ನೀತೂ ಕಪೂರ್​, 1980ರಲ್ಲಿ ನಮ್ಮ ವಿವಾಹ ನಡೆಯಿತು. ಅಂದು ಮರೆಯಲಾಗದ ಹಾಗೂ ತಮ್ಮ ಜೀವನದ ಅಚ್ಚರಿ ಘಟನೆಯೊಂದು ನಡೆದಿದೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಹೊಸ ಚಿತ್ರ ಜಗ್​ ಜಗ್​ ಜೀಯೋ ಚಿತ್ರದ ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಮದುವೆಯಲ್ಲಿ ಕಡಿಮೆ ಎಂದರೂ ಐದು ಸಾವಿರ ಜನರು ಭಾಗವಹಿಸಿದ್ದರು. ಇಷ್ಟು ಜನರನ್ನು ನಾವು ಮೊದಲ ಬಾರಿಗೆ ನೋಡಿದ್ದರಿಂದ ಇಬ್ಬರೂ ಗಾಬರಿಯಾಗಿದ್ದೆವು. ಇದರಿಂದ ನಾವಿಬ್ಬರೂ ಮೂರ್ಛೆ ಹೋಗಿದ್ದೆವು, ಇದಾದ ಬಳಿಕ ನಾವು ಮದ್ಯ ಸೇವಿಸಿದ್ದೆವು, ನಮ್ಮ ಮದುವೆಯಲ್ಲಿ ಸಪ್ತಪದಿ ತುಳಿಯುವ ವೇಳೆಯೂ ಇಬ್ಬರೂ ಕುಡಿದಿದ್ದೇವು ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net