ಭಗವಂತನಲ್ಲಿ ಶರಣಾದಾಗ ಜೀವನದಲ್ಲಿ ಏಳಿಗೆ : ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ

08
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಸಮಷ್ಟಿಯ ಹಿತ ಬಯಸುವುದರ ಜತೆಗೆ ಜೀವನದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆ ಮಾಡುವ ಪಾಪ, ಕರ್ಮಗಳು ಇಂತಹ ಮುಕ್ತಿ ಯಾಗಗಳಿಂದ ಮುಕ್ತಿ ದೊರಕುತ್ತದೆ. ಭಗವಂತ ಒಂದು ಶಕ್ತಿಯಾಗಿದ್ದು, ಭಗವಂತನ ಸ್ಮರಣೆಗೂ ಜೀವನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಉದಾತ್ತವಾದ ಸತ್ಯ, ಸಂಬಂಧವನ್ನು ಬೆಳೆಸಿಕೊಂಡು ಭಗವಂತನಲ್ಲಿ ಶರಣಾದಾಗ ಜೀವನದಲ್ಲೂ ತುತ್ತತುದಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು

ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಮಹಾಪವಮಾನ ಯಾಗ, ಶ್ರೀ ರಾಮತಾರಕ ಯಜ್ಞ, ಸಾಮೂಹಿಕ ಗೋಪೂಜೆ ಧರ್ಮಜಾಗೃತಿ ಸಭೆಯಲ್ಲಿ ಆಶೀರ್ವಚಿಸಿದರು.

ರಾ.ಸ್ವ.ಸೇ. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಧಾರ್ಮಿಕ ಉಪನ್ಯಾಸ ನೀಡಿದರು.

ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಯಾಗಫಲದ ಸಂದೇಶವನ್ನಿತ್ತರು. ಪವಮಾನ ಯಾಗ ಸಮಿತಿ ಅಧ್ಯಕ್ಷ ವಿಕಾಸ್ ಕುಮಾರ್ ಪಿ. ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಡಾ.ವೈ.ಭರತ್ ಶೆಟ್ಟಿ, ವಿಹಿಂಪ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕೈರಂಗಳ ಅಮೃತಧಾರಾ ಗೋಶಾಲಾ ಅಧ್ಯಕ್ಷ ಟಿ.ಜಿ.ರಾಜಾರಾಮ್ ಭಟ್, ವಿಹಿಂಪ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಹಿಂದು ಮುಖಂಡ ಮಿಥುನ್ ಪೂಜಾರಿ ಕಲ್ಲಡ್ಕ, ಬಜರಂಗದಳ ಕಲ್ಲಡ್ಕ ಪ್ರಖಂಡದ ಸಂಚಾಲಕ ಅಮಿತ್ ಕಲ್ಲಡ್ಕ, ವಿಹಿಂಪ ಕಲ್ಲಡ್ಕ ಪ್ರಖಂಡದ ಅಧ್ಯಕ್ಷ ಸಚಿನ್ ಮೆಲ್ಕಾರ್, ಮಂಚಿ ಮೋಂತಿಮಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎಸ್.ಆರ್.ಸತೀಶ್ಚಂದ್ರ, ಸುಳ್ಯ ಮಂಚಿ ಶ್ರೀ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗಣೇಶರ ಐತಾಳ್ ಚೌಕದಪಾಲು, ಕೋಡಿಬೈಲು ಸ್ವಾಮಿ ಕೊರಗಜ್ಜ ಸೇವಾ ಸ್ವಾಮಿ ಗೌರವಾಧ್ಯಕ್ಷೆ ಮಮತಾ ಕೃಷ್ಣಪ್ಪ ಪೂಜಾರಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಸ್ಥಾಪಕಾಧ್ಯಕ್ಷ ಪದ್ಮನಾಭ ಸಾಲ್ಯಾನ್, ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಮಾಧವ ಅಂಚನ್, ಸಂತೋಷ್ ಗುಂಡಿಮಜಲು, ಕೋಶಾಧಿಕಾರಿ ದೀಕ್ಷಿತ್ ಶೆಟ್ಟಿ ನಾಡಾಜೆ ಮತ್ತಿತರರಿದ್ದರು.

ವಿಹಿಂಪ ಮಂಚಿ ಘಟಕ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಸ್ವಾಗತಿಸಿದರು. ಮಾಚಿದೇವ ಶ್ರೀ ಮಹಾದೇವ ಸೊಸೈಟಿ ಸಿಇಒ ಪುಪ್ಪರಾಜ್ ವಂದಿಸಿದರು.

ಪ್ರತಿ ಗ್ರಾಮಮಟ್ಟದಲ್ಲಿ ನಿರಂತರವಾಗಿ ಪೂಜೆ, ಯಾಗದಂತ ಧಾರ್ಮಿಕ ಚಟುವಟಿಕೆ ಮೂಲಕ ಹಿಂದು ಸಮಾಜವನ್ನು ಎಚ್ಚರಿಸುವ ಕೆಲಸಗಳಾದಾಗ ರಾಷ್ಟ್ರ, ಧರ್ಮದ ಉಳಿವು ಸಾಧ್ಯ. ಪಿ.ಎಸ್.ಪ್ರಕಾಶ್ ರಾ.ಸ್ವ.ಸೇ. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net